Wed. Dec 25th, 2024

ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನ: ವ್ಯಕ್ತಿ ಅರೆಸ್ಟ್

Share this with Friends

ಅಮರಾವತಿ,ಜು.15: ತೂ ಇದೊಂದು ಅತ್ಯಂತ ಹೇಯ ಘಟನೆ, ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ನಡೆದಿದೆ.

ಪಾಪಿಯೊಬ್ಬ ಆರು ತಿಂಗಳ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕ್ರೂರ ಘಟನೆ ವರದಿಯಾಗಿದೆ.

ಈ ಕೃತ್ಯಕ್ಕೆ ಯತ್ನಿಸಿದವನು 40 ವರ್ಷದ ವ್ಯಕ್ತಿ.ಪೋಕ್ಸೊ ಕಾಯ್ದೆಯಡಿ ಈಗ ಆತನ ಬಂಧನವಾಗಿದೆ.

ಈತ ಬೋಯಿನಾ ವೆರಿಕ್ಕಯ್ಯ ಡೋರಾ.ಇವನು ಮಗುವಿನ ಕುಟುಂಬದ ದೂರದ ಸಂಬಂಧಿ.ಮಗುವಿನೊಂದಿಗೆ ಆಟವಾಡುವಂತೆ ನಟಿಸಿ ಅತ್ಯಾಚಾರದಂತ ನೀಚ ಕೆಲಸಕ್ಕೆ ಮುಂದಾಗಿದ್ದ.ಮಗುವಿನ ಅಳು ಕೇಳಿಸಿ ಮನೆಯವರು ರಕ್ಷಿಸಿದ್ದಾರೆ.

ನಂತರ ಓಡಿಹೋಗಿದ್ದ ಈತನನ್ನು ಪೊಲೀಸರು ಹೆಡೆಮುರಿ ಕಟ್ಟಿ ತಂದಿದ್ದಾರೆ.


Share this with Friends

Related Post