Wed. Dec 25th, 2024

ಎನ್ ಟಿಕೆ ಪಕ್ಷದ ಮುಖಂಡನ ಹತ್ಯೆ

Share this with Friends

ಚನ್ನೈ,ಜು.16:‌ ತಮಿಳುನಾಡಿನಲ್ಲಿ ರಾಜಕೀಯ ಪಕ್ಷದ ಮುಖಂಡರ ಹತ್ಯೆ ಮುಂದುವರಿದಿದೆ.

ತಮಿಳುನಾಡಿನ ಮಧುರೈನಲ್ಲಿ ನಾಮ್ ತಮಿಳರ್ ಕಚ್ಚಿ (ಎನ್ ಟಿಕೆ) ಪಕ್ಷದ ಮುಖಂಡನನ್ನು ಗುಂಪೊಂದು ಇಂದು ಬೆಳ್ಳಂ ಬೆಳಿಗ್ಗೆ ಅಟ್ಟಾಡಿಸಿ ಭೀಕರವಾಗಿ ಹತ್ಯೆ ಮಾಡಿದೆ.

ಬಾಲಸುಬ್ರಮಣಿಯನ್ ಕೊಲೆಯಾದ‌ ಎನ್ ಟಿಕೆ ಪಕ್ಷದ ಮುಖಂಡ.

ಅವರು ಮನೆಯ‌‌ ಮುಂದೆ ವಾಕಿಂಗ್ ಮಾಡುತ್ತಿದ್ದಾಗ ಏಕಾಏಕಿ ನಾಲ್ವರು ಅಪರಿಚಿತ ವ್ಯಕ್ತಿಗಳು ಸುತ್ತುವರಿದಿದ್ದಾರೆ ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ಬಾಲಸುಬ್ರಮಣಿಯನ್ ಅವರನ್ನು ಬೆನ್ನಟ್ಟಿ ಕ್ರೂರವಾಗಿ ಕೊಂದು ಗುಂಪು ಪರಾರಿಯಾಗಿದೆ.

ಘಟನೆಯ ಬಗ್ಗೆ ಸ್ಥಳೀಯರು‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ನೋಡುವಷ್ಟರಲ್ಲಿ ಬಾಲಸುಬ್ರಮಣಿಯನ್ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು,ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ನಡೆಸುತ್ತಿದ್ದಾರೆ.


Share this with Friends

Related Post