Thu. Dec 26th, 2024

ಶೆಡ್ ಗೆ ಬೆಂಕಿ ಹಚ್ಚಿದ ಪಾತಕಿಗಳು: ತಾಯಿ-ಮಗಳು ಸಜೀವದಹನ

Share this with Friends

ಬಾಗಲಕೋಟ,ಜು.16: ಶೆಡ್ ವೊಂದಕ್ಕೆ ಪೆಟ್ರೋಲ್ ಸುರಿದು ಪಾಪಿಗಳು ಬೆಂಕಿ ಹಚ್ಚಿದ್ದು, ತಾಯಿ-ಮಗಳು ಸುಟ್ಟುಹೋದ ಘಟನೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಬೆಳಗಲಿ ಗ್ರಾಮದಲ್ಲಿ ನಡೆದಿದ್ದು,
ಜೈಬಾನ (55), ಶಬಾನ (25) ಸಜೀವ ದಹನವಾದ ಮಹಿಳೆಯರು.

ಮನೆಯಲ್ಲಿದ್ದ ದಸ್ತಗೀರ್ ಸಾಬ್, ಸುಬಾನ್, ಸಿದ್ದಕಿ ಗಾಯಗೊಂಡಿದ್ದು,ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಂಟೆಕ್ಸ್ ಟ್ಯಾಂಕ್ ನಲ್ಲಿ ಪೆಟ್ರೋಲ್ ತುಂಬಿಸಿ ದುಷ್ಕರ್ಮಿಗಳು ಶೆಡ್ ಮೇಲೆ ಸುರಿದು ಬೆಂಕಿ ಹಚ್ಚಿದ್ದರಿಂದ ಶೆಡ್ ಸಂಪೂರ್ಣ ಸುಟ್ಟು ಕರಕಲಾಗಿದೆ.

ಕೌಟುಂಬಿಕ ವೈಷಮ್ಯದ ಹಿನ್ನೆಲೆಯಲ್ಲಿ ಇಂತಹ ‌ನೀಚ ಕೆಲಸ‌ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸ್ಥಳಕ್ಕೆ ಮಹಾಲಿಂಗಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post