Mon. Dec 23rd, 2024

ಟಿಪ್ಪುಸುಲ್ತಾನ್ ಭಾವಚಿತ್ರಕ್ಕೆ ಅಪಮಾನ ಅಪಮಾನ ಮಾಡಿದ್ದ ಆರೋಪಿ ಅರೆಸ್ಟ್

Tipu Sultan
Share this with Friends

ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಸಿರವಾರ ಪಟ್ಟಣದಲ್ಲಿ ಟಿಪ್ಪುಸುಲ್ತಾನ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಸಿರವಾರ ಪಟ್ಟಣದ ನಿವಾಸಿ ಆರೋಪಿ ಆಕಾಶ್(23) ಬಂಧಿತ ಆರೋಪಿ ಎಂದು ಹೇಳಲಾಗಿದೆ.

ಜನವರಿ 31 ರಂದು ಸಿರವಾರದಲ್ಲಿ ಟಿಪ್ಪು ಭಾವಚಿತ್ರಕ್ಕೆ ಅವಮಾನ ಮಾಡಲಾಗಿತ್ತು. ಪಟ್ಟಣದ ಮಟನ್ ಮಾರ್ಕೆಟ್ ಸಮೀಪ ಇರುವ ಟಿಪ್ಪು ಸರ್ಕಲ್ ನಲ್ಲಿ ಹಾಕಲಾಗಿದ್ದ ಟಿಪ್ಪು ಭಾವಚಿತ್ರಕ್ಕೆ ಕಿಡಿಗೇಡಿಗಳು ರಾತ್ರೋರಾತ್ರಿ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು .ಸಿರವಾರ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಆರೋಪಿಗಳ ಬಂಧನಕ್ಕೆ ಎಸ್.ಪಿ. ನಿಖಿಲ್ ಎರಡು ವಿಶೇಷ ತಂಡ ರಚಿಸಿದ್ದರು. ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಆಕಾಶ್ ಕೃತ್ಯವೆಸಗಿರುವುದು ಗೊತ್ತಾಗಿದೆ.


Share this with Friends

Related Post