Fri. Nov 1st, 2024

ಡಾಕ್ಟರ್ ಸಲಹೆ : ಡೆಂಗ್ಯೂ ಜ್ವರ ಬಂದಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಯಾವುವು ಗೊತ್ತಾ..?

Share this with Friends

ಡೆಂಗ್ಯೂ ಜ್ವರ ಉಷ್ಣವಲಯದ ಪ್ರಗತಿಶೀಲ ರಾಷ್ಟ್ರಗಳಲ್ಲಿ ಕಂಡುಬರುವ ಒಂದು ಪಿಡುಗು, ಒಬ್ಬರಿಂದ ಮತ್ತೊಬ್ಬರಿಗೆ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗ. ಸಾಧಾರಣವಾಗಿ ಈ ಡೆಂಗ್ಯೂ ಜ್ವರ ಮಳೆಗಾಲದಲ್ಲಿ, ನೀರು ನಿಂತಿರುವ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಡೆಂಗ್ಯೂ ಜ್ವರ ಬಂದಾಗ ಪ್ರತಿ ನಾಲ್ಕು ಜನರಲ್ಲಿ ಒಬ್ಬರಿಗೆ, ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಚಳಿ-ಜ್ವರ, ಮೈ ಕೈ ನೋವು, ಕೀಲುಗಳ ನೋವು, ಬೆನ್ನು ನೋವು, ವಾಂತಿ, ಆಯಾಸ, ಸುಸ್ತು ಮತ್ತು ತಲೆ ಸುತ್ತುವಿಕೆ ಡೆಂಗ್ಯೂ ಜ್ವರದ ಪ್ರಮುಖ ಲಕ್ಷಣಗಳು. ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡಾಗ, ಮನೆಯಲ್ಲೇ ಕೆಲವು ಸರಳವಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬಹುದು.
ಚಳಿ ಜ್ವರಕ್ಕೆ ಪ್ಯಾರಾಸಿಟಮಾಲ್ ಮಾತ್ರೆಗಳನ್ನು ಸೇವಿಸಬೇಕು.
ಕಿವಿ ಹಣ್ಣು, ಪಪ್ಪಾಯಿ ಎಲೆಯ ರಸ, ಯಥೇಚ್ಛವಾಗಿ ನೀರು ಕುಡಿಯುವುದು.

ಸೊಳ್ಳೆಗಳ ನಿರ್ಮೂಲನೆ, ನಿಂತ ನೀರನ್ನು ಹರಿಯಬಿಡುವುದು ರೋಗವು ಇತರರಿಗೆ ಹರಡುವುದನ್ನು ತಡೆಗಟ್ಟಲು ಉಪಾಯಗಳು. ಹೀಗೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರೂ ಕೂಡ, ಆದಷ್ಟು ಬೇಗನೆ ಸಮೀಪದ ವೈದ್ಯರನ್ನು ಭೇಟಿಯಾಗಿ ನಾಡಿಮಿಡಿತ, ಉಷ್ಣತೆ, ರಕ್ತದ ಒತ್ತಡ ಇತ್ಯಾದಿಗಳನ್ನು ತಪಾಸಣೆ ಮಾಡಿಸಿಕೊಳ್ಳಬೇಕು.

ವೈದ್ಯಕೀಯ ಸಲಹೆಯಂತೆ ಅಗತ್ಯವಾದ ರಕ್ತ ಪರೀಕ್ಷೆ ಮಾಡಿಸಿ , ಆಸ್ಪತ್ರೆಗೆ ಭರ್ತಿಯಾಗಿ ಸೂಕ್ತ ಚಿಕಿತ್ಸೆ ಪಡೆಯಬಹುದು.
ಈ ರೀತಿಯಲ್ಲಿ ಕ್ರಮವಾಗಿ ಮುನ್ನಡೆದರೆ ನಮ್ಮ ಕುಟುಂಬ ಮತ್ತು ನಮ್ಮ ಸಮುದಾಯವನ್ನು ಡೆಂಗ್ಯೂ ಜ್ವರದಿಂದ ಮುಕ್ತಗೊಳಿಸಬಹುದು.

ಡಾ. ಪವನ್ ಕೇಸರಿ.
pavankesariv@gmail.com


Share this with Friends

Related Post