Wed. Dec 25th, 2024

ಹುಲಿ ದಾಳಿಗೆ ಹಸು ಬಲಿ: ಆತಂಕದಲ್ಲಿಕೃಷ್ಣಪುರ ಗ್ರಾಮದ ಜ‌ನತೆ

Share this with Friends

ಹೆಚ್.ಡಿ.ಕೋಟೆ,ಜು.20: ಹೆಚ್.ಡಿ.ಕೋಟೆ ಸಮೀಪ ಹುಲಿ ದಾಳಿ ಮಾಡಿ ಹಸು ಬಲಿಯಾಗಿದ್ದು,ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಹೆಚ್.ಡಿ.ಕೋಟೆ ಪಟ್ಟಣದಿಂದ ಕೇವಲ 1ಕಿಮೀ ದೂರದಲ್ಲಿರುವ ಕೃಷ್ಣಪುರ ಗ್ರಾಮದ ಜಮೀನಿನಲ್ಲಿ ಹುಲಿ ಹಸುವನ್ನು ಬಲಿ ತೆಗೆದುಕೊಂಡಿದೆ.

ರಾಮಸ್ವಾಮಿ ಎಂಬುವವರು ಗುತ್ತಿಗೆಗೆ ಪಡೆದು ಕೃಷಿ ಚಟುವಟಿಕೆ ನಡೆಸುತ್ತಿರುವ ಜಮೀನಿ‌ನ‌ ಬಳಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಮೇಲೆ ಹುಲಿ ದಾಳಿ ಮಾಡಿದೆ.

ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಹಿಂಬಧಿಯ ಬಾಲು ಎಂಬುವವರ ಜಮೀನಿನಲ್ಲೂ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು ಕೂಡಲೇ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು‌ ಗ್ರಾಮದ ಜನ ಅರಣ್ಯ‌ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಹಸುವಿ‌ನ ದಾಳಿ ನಂತರ ಜೋಳದ ಜಮೀನಿನಲ್ಲಿ ಹುಲಿ ಇತ್ತೆಂದು ಸ್ಥಳೀಯರು ಹೇಳಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಚಲನವಲನ ಗಮನಿಸಲು ಸಿ.ಸಿ ಕ್ಯಾಮರ ಅಳವಡಿಸಿದ್ದಾರೆ.


Share this with Friends

Related Post