Wed. Dec 25th, 2024

ಕೆ ಆರ್ ಎಸ್ ಭರ್ತಿಗೆ ಕೆಲವೇ ಅಡಿ ಬಾಕಿ

Share this with Friends

ಮೈಸೂರು, ಜು.20: ಕೊಡಗು ಸೇರಿದಂತೆ ಮೈಸೂರು ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು ಕೃಷ್ಣರಾಜ ಸಾಗರ ಅಣೆಕಟ್ಟೆ‌ ಬರ್ತಿಯಾಗಲು ಕೆಲವೇ ಅಡಿ ಬಾಕಿ ಇದೆ.

ಜಲಾಶಯಕ್ಕೆ ಇಂದು 50 ಸಾವಿರಕ್ಕೂ‌ ಹೆಚ್ಚು ಕ್ಯೂಸೆಕ್ ನೀರು‌ ಹರಿದು ಬರುತ್ತಿದ್ದು ಜಲಾಶಯದ ನೀರಿನ ಮಟ್ಟ‌ 116.60 ಅಡಿ ಇದೆ.

ಕೆಆರ್ ಎಸ್ ಭರ್ತಿಯಾಗುತ್ತಿರುವುದರಿಂದ ಮಂಡ್ಯ,ಮೈಸೂರು ಭಾಗದ ಜನತೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಕಳೆದ‌ ವರ್ಷ ಈ ಸಮಯದಲ್ಲಿ ಜಲಾಶಯದಲ್ಲಿ ಕೇವಲ 89.10 ಅಡಿಗಳು ಮಾತ್ರ ಇತ್ತು.ಜತೆಗೆ ಮಳೆಗಾಲ ಮುಗಿದರೂ 100 ಅಡಿಗಳಷ್ಟೇ ಭರ್ತಿಯಾಗಿತ್ತು.

ಹಾರಂಗಿ, ಕಾವೇರಿ, ಕಪಿಲ, ತುಂಗಾ ಸೇರಿದಂತೆ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ, ಹಾಗಾಗಿ ನಿಧಿಪತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ


Share this with Friends

Related Post