Mon. Dec 23rd, 2024

ವಿಮೆ ಹಣಕ್ಕಾಗಿ ಮಹಿಳೆಯ‌ ಹತ್ಯೆ

Share this with Friends

ಪಿರಿಯಾಪಟ್ಟಣ,ಜು.21: ಮಹಿಳೆಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಪಿರಿಯಾಪಟ್ಟಣ ತಾಲ್ಲೂಕು ಚೌಥಿ ಗ್ರಾಮದಲ್ಲಿ ಘಟನೆ ನಡೆದಿದ್ದು
ಭಾಗ್ಯವತಿ (32) ಕೊಲೆಯಾದ ಮಹಿಳೆ.

5 ವರ್ಷದ ಹಿಂದೆ ಅಪಘಾತದಲ್ಲಿ ಭಾಗ್ಯವತಿ ಅವರ ಪತಿ ಮೃತಪಟ್ಟಿದ್ದರು.
ಇತ್ತೀಚೆಗೆ ಭಾಗ್ಯವತಿ ಅವರಿಗೆ ಪತಿಯ ವಿಮೆ ಹಣ ಬಂದಿತ್ತು.

ಮನೆಯಲ್ಲಿದ್ದ ವಿಮೆ ಹಣ ಚಿನ್ನಾಭರಣ ಕಳ್ಳತನವಾಗಿದ್ದು,ಈ ಹಣಕ್ಕಾಗಿಯೇ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಪಿರಿಯಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.


Share this with Friends

Related Post