Mon. Dec 23rd, 2024

ಹೆಚ್ ಡಿ ಕೆ ಮಿಲಿಟರಿ ತಂದು ಕಾರ್ಯಾಚರಣೆ ಮಾಡಿಸಿದ್ದಾರಾ:ಡಿಕೆಶಿ ಟೀಕೆ

Share this with Friends

ಬೆಂಗಳೂರು,ಜು.21: ಅಂಕೋಲಾಗೆ ಹೋಗಿರುವ ಹೆಚ್‍ಡಿಕೆ ಮಳೆ ಹಾನಿ ಸರಿಪಡಿಸಲು ಎಲ್ಲಿ ಫೀಲ್ಡ್‌ಗೆ ಇಳಿದಿದ್ದಾರೆ ಅವರೇನು ಮಿಲಿಟರಿ ತಂದು ಕಾರ್ಯಾಚರಣೆ ಮಾಡಿಸಿದ್ದಾರಾ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಎಲ್ರೀ ಫೀಲ್ಡಿಗಿಳಿದಿದ್ದಾರೆ,ಸೈನಿಕರನ್ನು ಕರೆತಂದು ಫೀಲ್ಡಿಗೆ ಇಳಿಯಬೇಕಿತ್ತು ಎಂದು ವ್ಯಂಗ್ಯ ವಾಡಿದರು.

ಸುಮ್ಮನೆ ಭೇಟಿ ಮಾಡುವುದಲ್ಲ, ನಾವು ಒಂದೇ ಗಂಟೆಯಲ್ಲಿ ನಮ್ಮ ಸಚಿವರನ್ನ ಸಂಪುಟ ಸಭೆಯಿಂದ ಅಲ್ಲಿಗೆ ಓಡಿಸಿದ್ದೇವೆ. ಕೃಷ್ಣಬೈರೆಗೌಡ, ಮಂಕಾಳ ವೈದ್ಯ ಏನು ಕ್ರಮ ತಗೊಬೇಕೊ ಅದನ್ನೆಲ್ಲಾ‌ ಮಾಡುತ್ತಿದ್ದಾರೆ ಎಂದು ಡಿಕೆಶಿ ತಿಳಿಸಿದರು.

ಹೆಚ್‍.ಡಿ.ಕುಮಾರಸ್ವಾಮಿಯವರು ಬರಲಿ, ಬೇಡ ಅಂದವರು ಯಾರು, ಈ ವಿಚಾರದಲ್ಲಿ ನಾನು ರಾಜಕೀಯ ಮಾಡಲ್ಲ, ಅವರು ಹೋಗುವುದಕ್ಕೆ ನಾವ್ಯಾಕೆ ಅಡ್ಡಿ ಮಾಡೋಣ ಎಂದರು.


Share this with Friends

Related Post