Tue. Dec 24th, 2024

ಡಿಆರ್ ಸಿ ಚಿತ್ರಮಂದಿರದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದ ಕಿಡಿಗೇಡಿಗಳು

Share this with Friends

ಮೈಸೂರು,ಜು.22: ನಗರದ ಬಿಎಂ ಹೆಬಿಟೇಟ್ ಮಾಲ್ನ ಡಿಆರ್ ಸಿ ಚಿತ್ರಮಂದಿರದಲ್ಲಿ ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು,
ನಗರಾದ್ಯಂತ‌ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ನಿನ್ನೆ ರಾತ್ರಿ ಸುಮಾರು 9.55 ರ ಸಮಯದಲ್ಲಿ ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ‌ ಕೂಗಿದ್ದಾರೆ.

ನಗರದ ಗೋಕುಲಮ್ ನ ಪ್ರತಿಷ್ಠಿತ ಬಿಎಮ್ ಹೆಬಿಟೇಟ್ ಮಾಲ್ ನಲ್ಲಿರುವ ಡಿ ಆರ್ ಸಿ ಚಿತ್ರಮಂದಿರದಲ್ಲಿ ಬ್ಯಾಡ್ ನ್ಯೂಸ್ ಚಿತ್ರ ರಿಲೀಸ್ ಆಗಿದ್ದು ಫಿಲಂ ಪ್ರಾರಂಭದಲ್ಲಿ ಒಂದೇ ಮಾತರಂ ಹಾಡು ಬರುವಾಗ ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.

ಘೋಷಣೆ ಕೂಗಿದ ನಂತರ ಪರ ವಿರೋಧಿಗಳ ನಡುವೆ ಮಾತಿನ ಚಕಮಕಿ ಜೋರಾಗಿದ್ದು, ಸ್ಥಳಕ್ಕೆ ಡಿ ಆರ್ ಸಿ ಫಿಲಂ ಸೆಕ್ಯೂರಿಟಿ ಹಾಗೂ ಪೊಲೀಸರು ಧಾವಿಸಿ ಘೋಷಣೆ ಕೂಗಿದವರನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಇನ್ಸ್ ಪೆಕ್ಟರ್ ಕುಮಾರ್ ನೇತೃತ್ವದಲ್ಲಿ ವಿಚಾರಣೆ ಮುಂದುವರೆದಿದೆ.


Share this with Friends

Related Post