Wed. Dec 25th, 2024

ಗುರುವಿನಿಂದ ಕಲಿತ ವಿದ್ಯೆ ಶ್ರೇಷ್ಠ :ಕೆ ಆರ್ ಶಿವಶಂಕರ್

Share this with Friends

ಮೈಸೂರು, ಜು.22: ಗುರು ಶಿಷ್ಯರ ಸಂಬಂಧ ಅನಾದಿ ಕಾಲದಿಂದಲೂ ಇದ್ದು,ಜ್ಞಾನದ ಭಂಡಾರವಾಗಿರುವ ಗುರುವಿನ ಬಳಿ ಕಲಿತ ವಿದ್ಯೆ ಶ್ರೇಷ್ಠ ಎಂದು ಹಿರಿಯ ವಕೀಲರಾದ ಕೆ ಆರ್ ಶಿವಶಂಕರ್ ಹೇಳಿದರು.

ನಗರದ ಟಿ ಕೆ ಲೇಔಟ್ ನಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ದಕ್ಷಿಣಾಮ್ನಾಯ ಶ್ರೀ ಶಾರದ ಪೀಠ,ಶೃಂಗೇರಿ,
ಶೃಂಗೇರಿ ಶ್ರೀ ಶಂಕರಮಠ ಅಭಿನವ ಶಂಕರಾಲಯ ಮೈಸೂರು,
ಹಾಗೂ ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ ಮತ್ತು ಮೈಸೂರು ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘ ಗುರುಪೂರ್ಣಿಮೆ ಅಂಗವಾಗಿ ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಎ ಎಸ್ ಜಿ ಕಣ್ಣಿನ ಆಸ್ಪತ್ರೆ ನೆರವಿನಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಕು ಹರಿಸಿ ವ್ಯಕ್ತಿಯನ್ನು ಸುಜ್ಞಾನದ ಕಡೆ ಕೊಂಡಯ್ಯುವ ಮಹಾನ್ ದೈವ ಗುರು. ಸನಾತನ ಧರ್ಮ ಸಂಸ್ಕೃತಿಯಲ್ಲಿ ತಂದೆ-ತಾಯಿ ನಂತರದ ಸ್ಥಾನವನ್ನು ಗುರುವಿಗೆ ನೀಡಲಾಗಿದೆ. ಕೇವಲ ಶಿಕ್ಷಣ ನೀಡಿದ ಗುರುಗಳಲ್ಲದೆ ನಮಗೆ ಸನ್ಮಾರ್ಗ ನೀತಿ ಮತ್ತು ನಮ್ಮ ಏಳಿಗೆ ಬಯಸುವ ಪ್ರತಿಯೊಬ್ಬರು ಗುರುಗಳಾಗಿರುತ್ತಾರೆ ಎಂದು ತಿಳಿಸಿದರು.

ನೂರಕ್ಕೂ ಹೆಚ್ಚು ಜನ ಉಚಿತ ಕಣ್ಣಿನ ತಪಾಸಣೆ ಶಿಬಿರ ಸದ್ಬಳಕೆ ಮಾಡಿಕೊಂಡರು ಹಾಗೂ 30 ಮಂದಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ , ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್,ಗೌರವಾಧ್ಯ ಎಸ್ ಜಯರಾಮ್, ಅಧ್ಯಕ್ಷ ಸುಬ್ಬರಾವ್, ಕಾರ್ಯದರ್ಶಿ ವಿಜಯ್ ಕುಮಾರ್, ಸಹ ಕಾರ್ಯದರ್ಶಿ ಪದ್ಮನಾಭ ರಾವ್, ಖಜಾಂಚಿ ನರಹರಿ ರಾವ್, ಸಂಘದ ಟ್ರಸ್ಟಿಗಳಾದ ಕೆ ಆರ್ ಶಿವಶಂಕರ್, ಸತ್ಯಮೂರ್ತಿ, ಮುಕುಂದ, ಕೃಷ್ಣಮೂರ್ತಿ, ವೇಣುಗೋಪಾಲ್ ರಾವ್, ನರಸಿಂಹರಾಜು, ದ್ವಾರಕನಾಥ್, ಮುಕುಂದಾಚಾರ್, ನಂದನ್, ಮತ್ತಿತರರು ಭಾಗವಹಿಸಿದ್ದರು.


Share this with Friends

Related Post