Wed. Dec 25th, 2024

ಸೂರಜ್ ರೇವಣ್ಣಗೆ ಷರತ್ತು ಬದ್ಧ ಜಾಮೀನು

Share this with Friends

ಬೆಂಗಳೂರು,ಜು.22: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ನ್ಯಾಯಾಲಯದಿಂದ ಲಿಖಿತ ಅನುಮತಿಯನ್ನು ಪಡೆದಿರಬೇಕು,ಸಂತ್ರಸ್ತರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸಬಾರದು,
ಅರ್ಜಿದಾರರು ಕೋರ್ಟ್ ಮುಂದೆ ಹಾಜರಾಗಬೇಕು,ತಿಂಗಳ ಪ್ರತಿ ಎರಡನೇ ಭಾನುವಾರ ಮತ್ತು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಹಾಜರಾತಿ ಹಾಕಬೇಕು, 6 ತಿಂಗಳ ಅವಧಿಗೆ ಅಥವಾ ಚಾರ್ಜ್ ಶೀಟ್ ಸಲ್ಲಿಸುವವರೆಗೆ ಅರ್ಜಿದಾರರು ಮತ್ತೆ ಈ ರೀತಿಯ ಅಪರಾಧ ಮಾಡಬಾರದು ಎಂದು ಕೋರ್ಟ್ ಸೂಚಿಸಿದೆ.

ಹೊಳೆ ನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೂರಜ್ ವಿರುದ್ಧ ಎಫ್ ಐಆರ್ ದಾಖಲಾಗಿತ್ತು.ಸೂರಜ್‌‌ ರನ್ನು ಜೂನ್ 23 ರಂದು ಸಿಐಡಿ ಬಂಧಿಸಿತ್ತು.


Share this with Friends

Related Post