ಮೊಬೈಲ್ ಫೋನ್ ಬೆಲೆ ಇಳಿಕೆ:ಯುವಜನತೆ ಖುಷ್
ನವದೆಹಲಿ,ಜು.23: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಸರ್ಕಾರದ 3ನೆ ಅವಧಿಯ ಮೊದಲ ಬಜೆಟ್ ಮಂಡನೆ ಮಂಡಿಸಿದ್ದಾರೆ.
ಈ ಬಜೆಟ್‌ನಲ್ಲಿ ಹಲವು ಸರಕು ಹಾಗೂ ಸೇವೆಗಳ ಮೇಲಿನ ತೆರಿಗೆ ಏರಿಳಿತ ಮಾಡಲಾಗಿದ್ದು ಬಜೆಟ್ ಬಳಿಕ ಏರಿಳಿತ ಕಾಣುವ ಸರಕು ಹಾಗೂ ಸೇವೆಗಳ ವಿವರ ಇಲ್ಲಿದೆ.
ಯಾವುದು ಅಗ್ಗ:
ಚಿನ್ನ, ಬೆಳ್ಳಿ, ಪ್ಲಾಟಿನಂ ಮೇಲಿನ ಆಮದು ಸುಂಕ ಕಡಿತ, ಬೆಲೆ ಇಳಿಕೆಯಾಗಲಿದ್ದು
ತಾಮ್ರದ ಮೇಲೂ ತೆರಿಗೆ ಕಡಿತ ಮಾಡಲಾಗಿದೆ.
ಮೊಬೈಲ್ ಫೋನ್ ಬಿಡಿ ಭಾಗಗಳ ಮೇಲಿನ ತೆರಿಗೆ ಇಳಿಕೆ ಮಾಡಲಾಗಿದ್ದು
ಮೊಬೈಲ್ ಫೋನ್ ಬೆಲೆ ಇಳಿಕೆಯಾಗಲಿದೆ ಜತೆಗೆ ಮೊಬೈಲ್ ಫೋನ್ ಚಾರ್ಜರ್ ಬೆಲೆ ಕೂಡಾ ಇಳಿಕೆಯಾಗುತ್ತಿದ್ದು,
ಯುವಜನತೆಗೆ ಖುಷಿ ಸುದ್ದಿಯಾಗಿದೆ.
ಅತಿ ಮುಖ್ಯವಾದ ಕ್ಯಾನ್ಸರ್ ಔಷಧದ ಬೆಲೆ ಇಳಿಕೆಯಾಗಿದ್ದು ರೋಗಿಗಳಿಗೆ ವರದಾನವಾಗಿದೆ
ಸೋಲಾರ್ ಪ್ಯಾನಲ್‌ಗಳು,
ವಿದ್ಯುತ್ ತಂತಿ ಮತ್ತು ಎಕ್ಸ್ ರೇ ಉಪಕರಣಗಳ ಬೆಲೆ ಕೂಡಾ ಇಳಿಕೆಯಾಗಿದೆ.
ವಿದೇಶಿ ಬಟ್ಟೆ, ಚರ್ಮೋತ್ಪನ್ನಗಳು, ಟಿವಿ ಅಗ್ಗವಾಗಲಿದ್ದು ಬಡ,ಮಧ್ಯಮ ವರ್ಗದವರಿಗೆ ಒಳಿತಾಗಲಿದೆ.
20 ಖನಿಜಗಳ ಮೇಲೆ ಅಬಕಾರಿ ಸುಂಕ ಇಳಿಕೆ ಮಾಡಿ
ಯಾವುದು ತುಟ್ಟಿ:
ಮರು ಬಳಕೆ ಆಗದ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳ ಬೆಲೆ ಏರಿಕೆಯಾಗಲಿದೆ,
ವಿವಿಧ ರೀತಿಯ ಬಟ್ಟೆ, ವಸ್ತ್ರಗಳ ಬೆಲೆ ಮತ
ಎಲ್ಲಾ ವಿದ್ಯುತ್ ಉಪಕರಣಗಳ ಬೆಲೆ ಏರಿಕೆಯಾಗಲಿದೆ.
ಸ್ಟೇಟ್ ಸ್ಟ್ಯಾಂಪ್ ಡ್ಯೂಟಿ ಹೆಚ್ಚಳಕ್ಕೆ ರಾಜ್ಯ ಸರ್ಕಾರಗಳಿಗೇ ಅವಕಾಶ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.