Mon. Dec 23rd, 2024

ಮೋದಿ ಆಡಳಿತದಲ್ಲಿ ಅರ್ಥ‌ ವ್ಯವಸ್ಥೆಗೆ ಶರವೇಗ ಸಿಕ್ಕಿದೆ:ನಿರ್ಮಲಾ‌

Share this with Friends

ನವದೆಹಲಿ,ಜು.23: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3.0 ಸರ್ಕಾರದ ಮೊದಲ ಬಜೆಟ್ ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ನಲ್ಲಿ ಮಡಿಸಿದರು.

ಲೋಕಸಭೆಯಲ್ಲಿ ಬಜೆಟ್ ಭಾಷಣ ಆರಂಭಿಸಿದ ನಿರ್ಮಲಾ ಸೀತಾರಾಮನ್, ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ತಿಳಿಸಿದರು.

ಭಾರತದ ಆರ್ಥಿಕತೆ ಅಭಿವೃದ್ಧಿಯಾಗಿದೆ. ಪ್ರಧಾನಿ ಮೋದಿ ಆಡಳಿತದಲ್ಲಿ ಅರ್ಥ‌ ವ್ಯವಸ್ಥೆಗೆ ಶರವೇಗ ಸಿಕ್ಕಿದೆ ಎಂದು ಹೇಳಿದರು.

ಮುಖ್ಯಾಂಶಗಳು: ಕೃಷಿ ಕ್ಷೇತ್ರಕ್ಕೆ 1.5 ಲಕ್ಷ ಕೋಟಿ ರೂ.ಘೋಷಣೆ ಮಾಡಲಾಗಿದ್ದು
ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್
ವರ್ಷದಲ್ಲಿ 1ಕೋಟಿ ರೈತರು ನೈಸರ್ಗಿಕ ಕೃಷಿ ವ್ಯಾಪ್ತಿಗೆ ಬರಲಿದ್ದಾರೆ ಎಂದು ತಿಳಿಸಿದರು.

ಶಿಕ್ಷಣ, ಕೌಶಲ್ಯ, ಉದ್ಯೋಗ ಅಭಿವೃದ್ಧಿಗಾಗಿ 1.48 ಲಕ್ಷ ಕೋಟಿ ಮೀಸಲಿಡಲಾಗಿದೆ,
ಮೊದಲಬಾರಿ ಉದ್ಯೋಗ ಮಾಡುವವರಿಗೆ ಒಂದು ತಿಂಗಳು ಸರ್ಕಾರದಿಂದಲೇ ವೇತನ ಸಿಗಲಿದೆ.

ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ 10 ಲಕ್ಷದವರೆಗೆ ಸಾಲ ಸೌಲಭ್ಯ,
5 ವರ್ಷಗಳಲ್ಲಿ 4.1 ಕೋಟಿ ಯುವಜನತೆಗೆ ಉದ್ಯೋಗ ಯೋಜನೆ,
5 ವರ್ಷಗಳಲ್ಲಿ ಟಾಪ್-500 ಕಂಪನಿಗಳಲ್ಲಿ ಒಂದು ಕೋಟಿ ಯುವಜನತೆಗೆ ಇಂಟರ್ನ್ ಶಿಪ್ ಗೆ ಅವಕಾಶ ನೀಡಲಾಗುವುದು ಎಂದು ನಿರ್ಮಾಲಾ ಪ್ರಕಟಿಸಿದರು.

ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ
ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ.
ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣ ಮಾಡಲಾಗುವುದು‌ ಎಂದು ತಿಳಿಸಿದರು.

ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪೂರ್ವೋದಯ ಯೋಜನೆ.

ಈಶಾನ್ಯ ರಾಜ್ಯಗಳಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನ 100 ಕ್ಕೂ ಹೆಚ್ಚು ಶಾಖೆಗಳ ಸ್ಥಾಪನೆ.

ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ರಾಷ್ಟ್ರೀಯ ಸಹಕಾರ ನೀತಿಯಡಿ
ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ.
ಆಂಧ್ರಪ್ರದೇಶಕ್ಕೆ 15,000 ಕೋಟಿ ರೂಪಾಯಿ ಆರ್ಥಿಕ ನೆರವು.

ಮಹಿಳೆಯರು, ಹೆಣ್ಣುಮಕ್ಕಳಿಗೆ ಅನುಕೂಲವಾಗುವ ಯೋಜನೆಗಳಿಗೆ ಸರ್ಕಾರ 3 ಲಕ್ಷ ಕೋಟಿ ರೂ
ಮುದ್ರಾ ಸಾಲ ಯೋಜನೆಯಡಿ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ.

100 ನಗರಗಳಲ್ಲಿ ಹೂಡಿಕೆಗೆ ಸಿದ್ಧವಾಗಿರುವ ಕೈಗಾರಿಕಾ ಪಾರ್ಕ್ ಗಳಿಗೆ ಕೇಂದ್ರ ಸರ್ಕಾರದಿಂದ ಉತ್ತೇಜನ.


Share this with Friends

Related Post