ಮೈಸೂರು, ಜು.24: ಆಧುನಿಕ ಮತ್ತು ವೈಜ್ಞಾನಿಕ ಬದುಕಿನ ಧಾವಂತಕ್ಕೆ ಹೊಂದಿಕೊಂಡರೆ ಮಾತ್ರ ಉಪನ್ಯಾಸಕರು ಯಶಸ್ಸು ಕಾಣಲು ಸಾಧ್ಯ ಎಂದು
ಪ್ರೊ. ಎಂ ಕೃಷ್ಣೇಗೌಡರು ಹೇಳಿದರು.
ಮೈಸೂರು ಜಿಲ್ಲಾ ಇತಿಹಾಸ ವೇದಿಕೆಯ ಇತಿಹಾಸ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮುಖ್ಯ ಉಪನ್ಯಾಸ ನೀಡಿ ಹಾಸ್ಯಕಲಾವಿದರೂ ಉಪನ್ಯಾಸಕರೂ ಆದ ಕೃಷ್ಣೇಗೌಡರು ಮಾತನಾಡಿದರು.
ಜಗತ್ತಿನ ಶ್ರೇಷ್ಠ ವೃತ್ತಿಯೆಂದರೆ ಅದು ಶಿಕ್ಷಕ ವೃತ್ತಿ,ಇವತ್ತಿನ ವೇಗಕ್ಕೆ ಹೊಂದಿಕೊಂಡು,ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಅಪರ್ಣಾ ಮನೋಭಾವದಿಂದ ಮಕ್ಕಳಿಗೆ ಬೋಧಿಸಿದರೆ ಅವರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತೀರಿ ಎಂದು ಅವರು ಸಲಹೆ ನೀಡಿದರು.
ಶಿಕ್ಷಕನಿಗೆ ಯಾವುದೇ ಅಧಿಕಾರದ,ಅಧಿಕಾರಿಯ ಹಂಗು ಇರಬಾರದು,ಲೋಕದ ಯಾವ ಶಕ್ತಿಗೂ,ಯಾವ ಹುದ್ದೆಗೂ ಕಡಿಮೆ ಇರದ ಸ್ಥಾನ ಶಿಕ್ಷಕರದ್ದು ಎಂದು ಕೃಷ್ಣೇಗೌಡರು ಬಣ್ಣಿಸಿದರು.
ಕೇವಲ ಸಂಬಳಕ್ಕೆ ಜೋತು ಬೀಳದೆ ಸಮಾಜಮುಖಿಯಾಗಿ ಸೃಜನಶೀಲರಾಗಿ ನಿಮ್ಮ ಸುತ್ತಮುತ್ತಲಿನ ಅವಕಾಶಗಳಿಗೆ ನೀವು ತೆರೆದುಕೊಂಡಾಗ ಅಗಾಧವನ್ನೇ ಸೃಷ್ಟಿಸಬಹುದು.
ಮೊಬೈಲ್ ನಂತಹ ಕಿರಾಣಿಯನ್ನು ಅಪ್ರಯೋಜಕ ಉಪಯೋಗಕ್ಕೆ ಸೀಮೀತಗೊಳಿಸದೇ ಅಪಾರ ಜ್ಞಾನದ ಹುಡುಕಾಟಕ್ಕೆ ಬೆಳೆಸಿಕೊಂಡಾಗ ಶಿಕ್ಷಕ ಜೀವಂತವಾಗಿರುತ್ತಾನೆ.ಇಲ್ಲವಾದರೆ ಊದುವ ಶಂಖ ಊದುತ್ತಲೇ ಇರುತ್ತಾನೆ ಅಂದಾಗ ಬದುಕಿದ್ದೂ ಸತ್ತಂತೆ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಪನಿರ್ದೇಶಕರಾದ ಎಂ.ಮರಿಸ್ವಾಮಿ ಮಾತನಾಡಿ ಉಪನ್ಯಾಸಕರು ಹೊಸ ಹೊಸ ಶೋಧನೆಗೆ ತಮ್ಮನ್ನು ತೊಡಗಿಸಿಕೊಂಡು ಬೋಧನೆಗೆ ಹೊಸ ಆಯಾಮ ನೀಡಬೇಕು
ಎಂದು ಸಲಹೆ ನೀಡಿದರು.
ಕಳೆದ ಸಾಲಿನಲ್ಲಿ ನೀಡಿದ ಇತಿಹಾಸ ವಿಷಯದ ಫಲಿತಾಂಶ ತೃಪ್ತಿ ತಂದಿದ್ದು ಈ ವರ್ಷವೂ ಅದೇ ಫಲಿತಾಂಶ ತಂದರೆ ಈ ಸಂಭ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಶೇ ನೂರರಷ್ಟು ಫಲಿತಾಂಶ ನೀಡಿದ ಉಪನ್ಯಾಸಕರು ಮತ್ತು ಇತಿಹಾಸದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಸ್ಮರಣಿಕೆ ಮತ್ತು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಕಾಯಕ್ರಮದಲ್ಲಿ ಜಿಲ್ಲಾ ಇತಿಹಾಸ ವೇದಿಕೆ ಅಧ್ಯಕ್ಷ ಹೆಚ್ ಬಿ ವಾಸು, ಕಾರ್ಯಾಧ್ಯಕ್ಷರಾದ ಎ.ಎಲ್.ಉಮೇಶ್ , ಶಿವಪ್ರಕಾಶ್, ಕಾರ್ಯದರ್ಶಿಯಾದ ಮಹಾದೇವಯ್ಯ, ಗಣೇಶ್, ಪೂರ್ಣಚಂದ್ರ, ಡಾ.ಉಮೇಶ್, ಬಸವರಾಜು ಎಸ್, ಮಹೇಶ್, ಮತ್ತಿತರರು ಉಪಸ್ಥಿತರಿದ್ದರು.