Mon. Dec 23rd, 2024

ಇಥಿಯೋಪಿಯಾದಲ್ಲಿ ಭೂಕುಸಿತ: 230 ಮಂದಿ ಸಾವು

Share this with Friends

ಇಥಿಯೋಪಿಯಾ,ಜು.24: ಭಾರೀ ಮಳೆಗೆ ಭೂಕುಸಿತ ಸಂಭವಿಸಿ ಸುಮಾರು 230 ಜನರು ಸಾವನ್ನಪ್ಪಿದ್ದಾರೆ.

ಮಣ್ಣಿನಡಿ ಇನ್ನೂ ಹಲವಾರು ಮಂದಿ ಸಿಲುಕಿದ್ದು,ಅವರನ್ನು ರಕ್ಷಿಸಲು ಪ್ರಯತ್ನಿಸಾಗುತ್ತಿದೆ.

ದಕ್ಷಿಣ ಇಥಿಯೋಪಿಯಾದ ಕೆಂಚೊ ಶಾಚಾ ಗೊಜ್ಡಿ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದ್ದು,ಮೃತಪಟ್ಟವರಲ್ಲಿ ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರು ಸೇರಿದ್ದಾರೆ ಎಂದು ಸ್ಥಳೀಯ ಆಡಳಿತಾಧಿಕಾರಿ ದಗ್ಮಾವಿ ಅಯೆಲೆ ಹೇಳಿದ್ದಾರೆ.

ಇಥಿಯೋಪಿಯಾದ ಆಡಳಿತ ಪಕ್ಷವು ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದೆ, ಪ್ರಧಾನಿ ಅಬಿ ಅಹ್ಮದ್ ಅವರು ಫೇಸ್‌ಬುಕ್ ನಲ್ಲಿ ಈ ಭೀಕರ ಘಟನೆಯಿಂದ ತೀವ್ರ ದುಃಖಿತನಾಗಿದ್ದೇನೆ ಎಂದು ‌ತಿಳಿಸಿದ್ದಾರೆ.

ಘಟನೆಯಲ್ಲಿ ಕೆಲವರು ಇಡೀ ಕುಟುಂಬವನ್ನು ಕಳೆದುಕೊಂಡಿದ್ದಾರೆ ಮಕ್ಕಳು ಶವಗಳನ್ನು ತಬ್ಬಿಕೊಂಡು ದುಃಖಿಸುತ್ತಿದ್ದಾರೆ‌ ಅದನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.


Share this with Friends

Related Post