Tue. Dec 24th, 2024

ಪಾರಿವಾಳ ರಕ್ಷಿಸಲು ಹೋಗಿ ಜೀವ ತೆತ್ತ‌ ಬಾಲಕ

Share this with Friends

ಚಿತ್ರದುರ್ಗ,ಜು.24: ಪಾರಿವಾಳವನ್ನು ರಕ್ಷಿಸಲು ವಿದ್ಯುತ್ ಕಂಬ ಏರಿದ್ದ ಬಾಲಕನೊಬ್ಬ ತಾನೆ ಜೀವ ತೆತ್ತಿರುವ ಹೃದಯ ವಿದ್ರಾವಕ ಘಟನೆ ‌ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ ನಡೆದಿದೆ.

ಮೊಳಕಾಲ್ಮೂರು ತಾಲೂಕಿನ ಹನುಮಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪಾರಿವಾಳವನ್ನು ರಕ್ಷಿಸಲು ವಿದ್ಯುತ್ ಕಂಬ ಹತ್ತಿದ್ದ ಬಾಲಕ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾನೆ.

ಹನುಮಾಪುರ ಗ್ರಾಮದ 6ನೇ ತರಗತಿಯ ವಿದ್ಯಾರ್ಥಿ ರಾಮಚಂದ್ರ (12) ಮೃತಪಟ್ಟ ಬಾಲಕ.

ವಿದ್ಯುತ್ ಕಂಬದ ತಂತಿಗೆ ಪಾರಿವಾಳ ಸಿಲುಕಿ ಹಾರಲಾಗದೆ ಒದ್ದಾಡುತ್ತಿತ್ತು,ಇದನ್ನು ಕಂಡ ಬಾಲಕ ಪಾರಿವಾಳವನ್ನು ರಕ್ಷಿಸಲು ವಿದ್ಯುತ್ ಕಂಬ ಹತ್ತಿದ,ಆಗ ವಿದ್ಯುತ್ ಶಾಕ್ ತಗುಲಿ ಬಾಲಕ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ರಾಂಪುರ ಪಿಎಎಸ್‌ಐ ಮಹೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪಾರಿವಾಳ ರಕ್ಷಿಸಲು ಹೋಗಿ ತಾನೇ ಬಲಿಯಾದನಲ್ಲಾ ಬಾಲಕ ಎಂದು ಇಡೀ ಗ್ರಾಮದ ಜನ‌ ಮಮ್ಮಲ ಮರುಗಿದರು, ಕುಟುಂಬದವರ ದುಃಖದ ಕಟ್ಟೆ ಒಡೆದಿತ್ತು.


Share this with Friends

Related Post