ಬೆಂಗಳೂರು,ಜು.25: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಪಾದಯಾತ್ರೆಗೆ ಮುಂದಾಗಿರುವುದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗರಿಗೆ ಟಾಂಗ್ ನೀಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಮೊದಲು ದಾಖಲೆ ಕೊಟ್ಟು ಅಮೇಲೆ ಪಾದಯಾತ್ರೆ ಮಾಡಲಿ ಎಂದು ಹೇಳಿದರು.
ಪಾದಯಾತ್ರೆ ಮಾಡಲಿ ಬಹಳ ಸಂತೋಷ, ವಾತಾವರಣ ಚೆನ್ನಾಗಿದೆ ಪಾದಯಾತ್ರೆ ಮಾಡಲಿ, ಮೊದಲು ದಾಖಲೆ ಕೊಡಲಿ ಎಂದು ತಿಳಿಸಿದರು.
ಬಿಜೆಪಿಯವರು ಕೇಂದ್ರ ಬಜೆಟ್ ಬಗ್ಗೆ ಮಾತನಾಡೋದಿಲ್ಲಾ,ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ, ಅದರ ಬಗ್ಗೆ ಏನೂ ಹೇಳಲ್ಲಾ,ತಮ್ಮ ಅವಧಿಯ ಹಗರಣಗಳ ಬಗ್ಗೇನೂ ಮಾತನಾಡಲ್ಲ, ಕೇವಲ ಮುಡಾ ಹಗರಣದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ, ಜೆಡಿಎಸ್ ನವರು ದಾಖಲೆ ಕೊಟ್ಟು ಮಾತನಾಡಲಿ. ಏನೇನು ದಾಖಲೆಗಳಿವೆ ಕೊಡಲಿ ಬೇಡ ಅಂದೋರು ಯಾರು?, ಬೋವಿ ನಿಗಮದ ಅಕ್ರಮ ಕೇಸ್ ಬಗ್ಗೆ ಚರ್ಚಿಸಲು ಮುಂದಾಗಿಲ್ಲಾ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.