ಮೈಸೂರು,ಜು.25: ಪ್ಲಾಸ್ಟಿಕ್ ಕವರುಗಳನ್ನು ಬಳಸದಂತೆ ತಿಳುವಳಿಕೆ ಮೂಡಿಸಲು ಮೈಸೂರು ಮಹಾ ನಗರಪಾಲಿಕೆ ಕಸರತ್ತು ನಡೆಸುತ್ತಲೇ ಇದೆ.
ರಾಜ್ಯದಲ್ಲಿ ಏಕ-ಬಳಕೆಯ ಪಾಲಿಥಿನ್ ಚೀಲಗಳ ಮಾರಾಟವನ್ನು ನಿಷೇಧಿಸಲಾಗಿದೆ,
ಆದರೂ ಪ್ಲಾಸ್ಟಿಕ್ ಚೀಲಗಳನ್ನು ಕೆಲವರು ಬಳಸುತ್ತಲೇ ಇದ್ದಾರೆ,ಹಾಗಾಗಿ ಪಾಲಿಕೆ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತಾರಾದ ಆಶಾದ್ ಉರ್ ರೆಹಮಾನ್ ಶರೀಫ್ ಅವರು ಪ್ರತಿ ಮನೆಗೂ ತೆರಳಿ ಜಾಗೃತಿ ಮೂಡಿಸಲು ಎಲ್ಲಾ ವಾರ್ಡಿನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ 1ನೇ ವಲಯದಲ್ಲಿ ಮನೆ ಮನೆಗೆ ತೆರಳಿ ಬಟ್ಟೆ ಬ್ಯಾಗ್ ವಿತರಣೆ ಮಾಡಲಾಯಿತು.
ಮೈಸೂರು ಅಗ್ರಹಾರ ಭಾಗದಲ್ಲಿ ಪಾಲಿಕೆ ಅಧಿಕಾರಿಗಳು ಮನೆ,ಮನೆಗೆ ಭೇಟಿ ನೀಡಿ ಬಟ್ಟೆ ಚೀಲಗಳನ್ನು ವಿತರಿಸಿದರು.ಈ ವೇಳೆ ಪಾಲಿಥಿನ್ ಬ್ಯಾಗ್‌ಗಳಿಂದಾಗುವ ಹಾನಿ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಈ ಬಟ್ಟೆ ಬ್ಯಾಗ್ ಅನ್ನು ಸೈಕಲ್ ಪ್ಯೂರ್ ಅಗರಬತ್ತಿ ರಂಗ ರಾವ್ ಅಂಡ್ ಸನ್ಸ್ ನವರು ಅಧಿಕಾರಿಗಳಿಗೆ ಬಟ್ಟೆ ಬ್ಯಾಗ್ ನೀಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನೆರವಾದರು.
ವಲಯ ಕಚೇರಿ 1 ವಲಯ ಆಯುಕ್ತ ಮಂಜುನಾಥ ರೆಡ್ಡಿ, ಪರಿಸರ ಅಭಿಯಂತರರಾದ ಜ್ಯೋತಿ ,ಹಿರಿಯ ಆರೋಗ್ಯ ನಿರೀಕ್ಷಕ ಶಿವಪ್ರಸಾದ್,ಆರೋಗ್ಯ ನಿರೀಕ್ಷಕಿ ಶೋಭಾ ,ಪ್ರೀತಿ , ರಂಗ ರಾವ್ ಅಂಡ್ ಸನ್ಸ್ ಕಂಪನಿ ಮುಖ್ಯಸ್ಥ ಸುಬ್ರಹ್ಮಣ್ಯ ,ಇಂಜಿನಿಯರ್ ಸಂತೋಷ್ ಮತ್ತಿತರರು ಹಾಜರಿದ್ದರು.