Mon. Dec 23rd, 2024

ರೂಪಾ‌ನಗರ ನಿವಾಸಿಗಳಿಂದ ಟೆನ್ನಿಸ್ ಬಾಲ್, ವಾಲಿಬಾಲ್ ಕೋರ್ಟ್ ನಿರ್ಮಾಣ

Share this with Friends

ಮೈಸೂರು, ಜು.25: ಬೋಗಾದಿಯ ರೂಪ ನಗರದ ನಿವಾಸಿಗಳು ಅತ್ಯುತ್ತಮ ಕಾರ್ಯ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ರೂಪ ನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರೂಪ ನಗರದ ನಿವಾಸಿಗಳು ಉದ್ಯಾನವನ ಅಭಿವೃದ್ಧಿಗಾಗಿ ತಾವು ಉಳಿಸಿದ ಹಣದಿಂದ,ಸುಮಾರು 250 ವಿವಿಧ ಬಗೆಯ ಗಿಡಗಳನ್ನು ನೆಟ್ಟು, ಮಕ್ಕಳ ಆಟಿಕೆ, ಮತ್ತು ಟೆನ್ನಿಸ್ ಬಾಲ್ ಮತ್ತು ವಾಲಿಬಾಲ್ ಕೋರ್ಟ್ ನಿರ್ಮಿಸಿದ್ದಾರೆ.

ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಒ ಗಾಯಿತ್ರಿ ಕೆ ಎಂ ಅವರು,
ಪ್ರತಿಯೊಬ್ಬರು ಆರೋಗ್ಯವಂತರಾಗಿರಲು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಉದ್ಯಾನವನವನ್ನು ತಮ್ಮ ಮನೆಯಂತೆ ಸ್ವಚ್ಛವಾಗಿ ಕಾಪಾಡಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು
ನಮ್ಮ ವನ ಎಂಬ ಹೆಸರಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ರೂಪ ನಗರ ಕ್ಷೇಮಾಭಿವೃದ್ಧಿ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ವಿಶೇಷ ಅಭಿನಂದನೆಗಳು ಎಂದು ಹೇಳಿದರು.

ಈ ವೇಳೆ ಸ್ಥಳೀಯ ನಿವಾಸಿಗಳಾದ ಸದಾಶಿವ ಪೂಜಾರಿ, ಬಾಲಕೃಷ್ಣ,ಅಧ್ಯಕ್ಷ ಉದಯ್ ಶಂಕರ್, ಉಪಾಧ್ಯಕ್ಷರಾದ, ಉಮಾ ಪೇಶ್ವ , ಸೋಮಯ್ಯ ಜಿ, ಶ್ರೀಧರ್ ತಂತ್ರಿ, ಸಾಧನಾ ತಂತ್ರಿ, ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ರಾಘವೇಂದ್ರ ಡಿ, ಸೂರ್ಯನಾರಾಯಣ, ಪ್ರಿಯಾ, ಮಾಯ, ಲಲಿತಾ, ಹಾಗೂ ನಿವಾಸಿಗಳು ಹಾಜರಿದ್ದರು.


Share this with Friends

Related Post