Mon. Dec 23rd, 2024

ಚಾಮುಂಡೇಶ್ವರಿ ದೇವಿ ವರ್ಧಂತಿ: ಭಕ್ತರಿಗೆ ಉಡಿ ತುಂಬಿದ ಮಹಿಳೆಯರು

Share this with Friends

ಮೈಸೂರು,ಜು. 27: ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಶ್ರೀ ಚಾಮುಂಡೇಶ್ವರಿ ದೇವಿ ವರ್ಧಂತಿ ಪ್ರಯುಕ್ತ ಬೆಟ್ಟದ ಪಾದದಲ್ಲಿ ದೇವಿ ದರ್ಶನಕ್ಕೆ ಆಗಮಿಸಿದ ಮಹಿಳೆಯರಿಗೆ ಉಡಿ ತುಂಬಲಾಯಿತು.

ಈ ವೇಳೆ ಮಾತನಾಡಿದ ಶ್ರೀ ದುರ್ಗಾ ಫೌಂಡೇಶನ್ ‌ಅಧ್ಯಕ್ಷೆ ರೇಖಾ ಶ್ರೀನಿವಾಸ್
ಆಷಾಢ ಮಾಸದಲ್ಲಿ‌ ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ ಎಂದು ಹೇಳಿದರು.

ಈ ಹಿನ್ನಲೆಯಲ್ಲಿ ಸಾವಿರಾರು ಭಕ್ತರು ತಾಯಿಗೆ ಹರಕೆ ತಿರಿಸಲು ಬೆಟ್ಟದ ಪಾದದಿಂದ ಮೇಲ್ಬಾಗದವರೆಗೂ ಅರಿಶಿನ ಕುಂಕುಮ ಹಚ್ಚುತ್ತಾರೆ. ಅಂತಹ ಮಹಿಳಾ ಭಕ್ತಾಧಿಗಳಿಗೆ ಅರಿಶಿನ ಕುಂಕುಮ ಹಾಗೂ ಬಳೆಗಳನ್ನು ನೀಡಿ ಅವರಿಗೆ ತಾಯಿ ಚಾಮುಂಡೇಶ್ವರಿ ಒಳಿತು ಮಾಡಲಿ ಎಂದು ಆರೈಸಿ ಉಡಿ ತುಂಬಿದ್ದೇವೆ ಎಂದು ತಿಳಿಸಿದರು.

ಲತಾ ಮೋಹನ್, ಸಮಾಜ ಸೇವಕರಾದ ಶಾಂತ,ಅಂಬಾಭವಾನಿ ಸಮಾಜ ಮಹಿಳಾ ಅಧ್ಯಕ್ಷೆ ಸವಿತಾ ಘಾಟ್ಕೆ,ಸುಮಿತ್, ಶೃತಿ, ಮಂಜುಳ,ಸುವರ್ಣ ಮತ್ತಿತರರು ಹಾಜರಿದ್ದರು


Share this with Friends

Related Post