Mon. Dec 23rd, 2024

ಕ್ಷುಲ್ಲಕ ಜಗಳ: ಪ್ರೇಮಿಗಳ‌ ಆತ್ಮಹತ್ಯೆ

Share this with Friends

ಮೈಸೂರು,ಜು.27: ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ತಿಳಿದು ನೊಂದ ಪ್ರಿಯಕರ ಕೂಡಾ ನೇಣು ಹಾಕಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಮಂಡಕಳ್ಳಿ ಗ್ರಾಮದ ಮೋನಿಕಾ(20)
ಮೈಸೂರಿನ ಜ್ಯೋತಿನಗರದ ಮನು(22) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.

ಹತ್ತಿರದ ಸಂಬಂಧಿಗಳಾದ‌ ಇವರಿಬ್ಬರೂ ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದರು.
ಮನೆಯವರು ಇಬ್ಬರಿಗೂ ಮದುವೆ ಮಾಡಲು ತೀರ್ಮಾನಿಸಿದ್ದರು.

ಆದರೆ ಇತ್ತೀಚೆಗೆ ಪ್ರೇಮಿಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಭಿನ್ನಾಭಿಪ್ರಾಯ ಬಂದು ಗಲಾಟೆ ಆಗಿದೆ.ಇದರಿಂದ ಬೇಸತ್ತ ಮೋನಿಕಾ ದಟ್ಟಗಳ್ಳಿಯ ಕೆಲಸ ಮಾಡುತ್ತಿದ್ದ ಮನೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾಳೆ.

ವಿಷಯ ತಿಳಿದ ಮನು ಸ್ಥಳಕ್ಕೆ ಧಾವಿಸಿ ಮೋನಿಕಾಳನ್ನ ಆಸ್ಪತ್ರೆಗೆ ಕರೆತಂದಿದ್ದಾನೆ.ಆದರೆ ಮೋನಿಕಾ ಮೃತಪಟ್ಟಿದ್ದಾಳೆ,ಇದರಿಂದ ಮನನೊಂದ ಮನು ತನ್ನ ಮನೆಗೆ ಹೋಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ

ಒಟ್ಟಾರೆ ಸಣ್ಣ ಜಗಳದಿಂದ ಇಬ್ಬರೂ ಸಾವು ತಂದುಕೊಂಡಿದ್ದಾರೆ.ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post