ಬೆಳಗಾವಿ: ಬೆಳಗಾವಿ: ಐಟಿಸಿ ಹೊಟೇಲ್ ಸಮೂಹ ಮತ್ತೊಂದು ಹೆಜ್ಜೆ ಇಟ್ಟು ಕುಂದಾನಗರಿ ಬೆಳಗಾವಿಯಲ್ಲಿ ತನ್ನ 25 ನೇ ಹೊಟೇಲನ ಕಾರ್ಯಕ್ರಮ ಉದ್ಘಾಟನೆ ಶುಕ್ರವಾರ ನೇರವೆರಿತು.
ಕಾಕತಿ ಗ್ರಾಮದಲ್ಲಿ ವೆಲಕಮ್ ಹೊಟೇಲ್ವನ್ನು ಜೊಲ್ಲೆ ಗ್ರೂಪ್ ಹಾಗೂ ಐಟಿಸಿ ಜಂಟಿಯಾಗಿ ಕಾರ್ಯನಿರ್ವಹಣೆ ಮಾಡಲಿದ್ದು ನೈಸರ್ಗಿಕವಾಗಿ ಸೌಂದರ್ಯ ಕಲ್ಪಿಸುವ ತಾಣದಡಿಯಲ್ಲಿ ವೆಲಕಮ್ ಹೊಟೇಲ ನಿರ್ಮಾಣ ಮಾಡಲಾಗಿದೆ ಎಂದು ಜೊಲ್ಲೆ ಹಾಸ್ಪಿಟಾಲಿಟಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ಬಸವ ಪ್ರಸಾದ ಜೊಲ್ಲೆ ಹೇಳಿದರು.
ಪ್ರವಾಸಿಗರಿಗೆ ನೈರ್ಸಗಿಕ ಸೌಂದರ್ಯದ ಸೊಬಗು ನೀಡುವ ಹಸಿರು ಬೆಟ್ಟಗಳ ವಾತವರಣವನ್ನು ಇಲ್ಲಿ ಕಾಣಬಹುದಾಗಿದೆ.ಇನ್ನು ಬೆಳಗಾವಿ ನಗರ ಹಾಗೂ ವಿಮಾನ ನಿಲ್ದಾಣದಕ್ಕೆ ಸಂಪರ್ಕಕ್ಕೆ ಅನೂಕೂಲವಾಗಿರುವ ಈ ಹೊಟೇಲನ್ನು ಸುಮಾರು 5 ಎಕರೆ ಜಾಗದಲ್ಲಿ ತಲೆ ಎತ್ತಿ ನಿಂತಿದೆ ಎಂದರು.
ಇನ್ನು ಮಾಜಿ ಸಂಸದರು ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಈಗಾಗಲೇ ಜೊಲ್ಲೆ ಗ್ರೂಪನಲ್ಲಿ ಸಹಕಾರ, ಶಿಕ್ಷಣ , ಕೈಗಾರಿಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಪಡೆದುಕೊಂಡು ಇದೀಗ ಖಾಸಗಿ ವಲಯದಲ್ಲಿ ಪ್ರವಾಸಿಗರಿಗೆಗಾಗಿ ಈ ಹೊಟೇಲ್ ಅನೂಕೂಲಕರ ಜೊತೆಗೆ ವಿಶಾಲವಾದ ಕೊಠಡಿಗಳು ಕಾರ್ಪೊರೇಟ್, ಸಭೆಗಳು, ಪ್ರೋತ್ಸಾಹದಾಯಕ ಕಾರ್ಯಕ್ರಗಳಿಗೆ ಅತಿಥ್ಯ ಸಹಕಾರ ದೊರೆಯಲಿದೆ ಎಂದು ಹೇಳಿದರು.
ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಮಾತನಾಡಿ ಈಗಾಗಲೇ ಜೊಲ್ಲೆ ಗ್ರೂಪನಲ್ಲಿ ಯುವಕ ಯುವತಿಯರಿಗೆ ಶೈಕ್ಷಣಿಕವಾಗಿ, ರೈತರಗಾಗಿ ಬ್ಯಾಂಕಿನ ವ್ಯವಹಾರದಲ್ಲಿ ಹಾಗೂ ಗ್ರಾಮೀಣ ಮಹಿಳೆಯರಿಗಾಗಿ ಸ್ವಾಲಂಬಿ ಉದ್ಯೋಗವನ್ನು ಸೃಷ್ಟಿಸುವಲ್ಲಿ ಮುಂಚೂಣಿ ಪಡೆದುಕೊಂಡಿದೆಂದರು.
ಅದೇ ರೀತಿ ಖಾಸಗಿ ತನದಲ್ಲಿ ಬರುವುದಕ್ಕೆ ಒಂದು ಗುರಿ ಇಟ್ಟುಕೊಂಡು ಐಟಿಸಿ ಹೊಟೇಲ್ ಜೊತೆಗೆ ಜೊಲ್ಲೆ ಹಾಸ್ಪಿಟಾಲಿಟಿ ಒಪ್ಪಂದವನ್ನು ಮಾಡಿಕೊಂಡು ಇದೀಗ ಹೊಸ ಹೆಜ್ಜೆಟ್ಟು ಮಹತ್ವದ ಮೈಲಿಗಲ್ಲಾಗಿ ಹೊರಹೊಮ್ಮಿದೆ.
ಈ ಸಮಯದಲ್ಲಿ ಈ ಕಾರ್ಯಕ್ರಮದ ನಿರೂಪಣೆ ಅಂಜಲಿ ನಿರ್ವಹಿಸಿದರು.ಐಟಿಸಿಯ ಜನರಲ್ ಮ್ಯಾನೇಜರ ರಾಹುಲ,ಹಾಗೂ ಐಟಿಸಿ ಹೊಟೇಲ್ ಹಾಗೂ ಜೊಲ್ಲೆ ಗ್ರೂಪನ ಅಧಿಕಾರಿ ವರ್ಗ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.