Mon. Dec 23rd, 2024

ಅರಮನೆ ಆವರಣದಲ್ಲಿ ರಥಸಪ್ತಮಿ ಸಂಭ್ರಮ

Share this with Friends

ಮೈಸೂರು,ಫೆ.16: ಸಾಂಸ್ಕೃತಿಕ ನಗರಿ ಮೈಸೂರು ಅರಮನೆ ಆವರಣದಲ್ಲಿ ರಥ ಸಪ್ತಮಿ ಸಂಭ್ರಮ ಮನೆ ಮಾಡಿದೆ.

ಅರಮನೆ ಆವರಣದಲ್ಲಿರುವ ವಿವಿಧ ದೇಗುಲಗಳ ಉತ್ಸವ ಮೂರ್ತಿಗಳನ್ನು.8 ರಥಗಳಲ್ಲಿ ಆವರಣಕ್ಕೆ ತರಲಾಯಿತು.

ನಂತರ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಮುಂಜಾನೆಯಿಂದಲೇ ಭಕ್ತರು ಅರಮನೆಗೆ ಆಗಮಿಸಿ ಉತ್ಸವ ಮೂರ್ತಿಗಳಿಗೆ ಭಕ್ತಭಾವದಿಂದ ನಮಿಸಿದರು.

ಗಾಯಿತ್ರಿ, ಸರಸ್ವತಿ, ಸಾವಿತ್ರಿ, ತ್ರಿನೇಶ್ವರ ಸ್ವಾಮಿ, ಲಕ್ಷ್ಮಿ ವೆಂಟಕರಮಣ,
ಖಿಲ್ಲೆ ವೆಂಕಟರಮಣ, ಶ್ವೇತ ವರಹಾ ಸ್ವಾಮಿ, ಮಹಾಲಕ್ಷ್ಮಿ ದೇವಿ ಹೀಗೆ ಒಟ್ಟು 8 ದೇಗುಲಗಳ ಉತ್ಸವ ಮೂರ್ತಿಗಳಿಗೆ ಪೂಜೆ ನೆರವೇರಿತು.

ಭಕ್ತರಿಗೆ ಒಂದೇ ಕಡೆ 8 ದೇವರುಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸೂರ್ಯದೇವ ತನ್ನ ಫಥ ಬದಲಾಯಿಸುವ ದಿನವನ್ನು ರಥಸಪ್ತಮಿ ಎಂದು ಆಚರಿಸಲಾಗುತ್ತದೆ.

ಹಾಗಾಗಿ ಅರಮನೆ ಆವರಣದಲ್ಲಿ ಉತ್ಸವಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ.

ರಾಜವಂಶಸ್ಥ ಯದುವೀ‌ರ‌ ಕೃಷ್ಣದತ್ತ‌ ಚಾಮರಾಜ ಒಡೆಯರ್ ‌ಅವರು ಪತ್ನಿ ತ್ರಿಶಿಕಾ ಹಾಗೂ ಪುತ್ರ ಆದ್ಯವೀರ್ ಸಮೇತ ಆಗಮಿಸಿ ಉತ್ಸವಮೂರ್ತಿಗಳ ದರುಶನ ಪಡೆದು ನಮಿಸಿದರು.


Share this with Friends

Related Post