Mon. Dec 23rd, 2024

ಶ್ರೀ ‌ಪಾರ್ವತಿದೇವಿಗೆ‌ ವಿಶೇಷ ಅಲಂಕಾರ

Share this with Friends

ಮೈಸೂರು, ಜು.27: ಮೈಸೂರಿನ ಅಗ್ರಹಾರದ ಕೆಆರ್ ಪೊಲೀಸ್ ಸ್ಟೇಷನ್ ಬಳಿ ಇರುವ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಪಾರ್ವತಿ ದೇವಿಗೆ ವಿಶೇಷ ಅಭಿಷೇಕ, ಪೂಜೆ ನೆರವೇರಿಸಲಾಯಿತು.

ಇಂದು ಶ್ರೀ ಚಾಮುಂಡೇಶ್ವರಿ ದೇವಿ ವರ್ಧಂತಿ ಉತ್ಸವ. ಹಾಗಾಗಿ ಆದಿಶಕ್ತಿಯಾದ ಪಾರ್ವತಿ ದೇವಿಗೆ ವಿಶೇಷ ಅಭಿಷೇಕ ಪೂಜೆ ನೆರವೇರಿಸಿ ವಿವಿಧ ಹೂಗಳಿಂದ ಭವ್ಯವಾಗಿ ಅಲಂಕಾರ ಮಾಡಲಾಯಿತು.

ನಿಂಬೆಹಣ್ಣು ಸೇಬು, ದ್ರಾಕ್ಷಿ, ಬಾಳೆಹಣ್ಣು ಸಿರಿದಂತೆ ವಿವಿಧ ಹಣ್ಣುಗಳಿಂದ ದೇವಿಯನ್ನು ಅಲಂಕರಿಸಿ ಹರಿಶಿನ ಕುಂಕುಮ ಬಳೆ ಮೊಡಲಕ್ಕಿ ಸಹಿತ ಆರತಿ ಮಾಡಿ ಪೂಜೆ ನೆರವೇರಿಸಲಾಯಿತು.

ಈ ವೇಳೆ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ‌ ವಿನಿಯೋಗ ಮಾಡಲಾಯಿತು ದೇವಾಲಯದ ಮುಖ್ಯ ಶಿವಾರ್ಚಕರಾದ ಎಸ್.ಯೋಗಾನಂದ ಅವರ ನೇತೃತ್ವದಲ್ಲಿ ಈ ಎಲ್ಲಾ ಪೂಜಾ ಕೈಂಕರ್ಯಗಳು ನೆರವೇರಿದವು.


Share this with Friends

Related Post