Mon. Dec 23rd, 2024

ಶ್ರೀ ಚಾಮುಂಡೇಶ್ವರಿ ಜನ್ಮದಿನ:ಲಲಿತ ಮಹಲ್ ಹೋಟೆಲ್ ಬಳಿ ಪ್ರಸಾದ ವಿನಿಯೋಗ

Share this with Friends

ಮೈಸೂರು, ಜು.27: ಶ್ರೀ ಚಾಮುಂಡೇಶ್ವರಿ ವರ್ಧಂತಿ ಪ್ರಯುಕ್ತ ಮೈಸೂರಿನ ಸಿದ್ದಾರ್ಥ ನಗರದ ಲಲಿತ ಮಹಲ್ ಹೋಟೆಲ್ ಮುಖ್ಯರಸ್ತೆಯಲ್ಲಿ ಚಾಮುಂಡಿ ತಾಯಿಯನ್ನು ಪ್ರತಿಷ್ಠಾಪಿಸಿ ನೂರಾರು ಜನರಿಗೆ ಅನ್ನ ಪ್ರಸಾದ ಹಮ್ಮಿಕೊಳ್ಳಲಾಯಿತು.

ಅಂಗಡಿ ಮಾಲೀಕರಾದ ವಿಜಯ್‌ಕುಮಾರ್‌ ಹೇಮಾ‌ ದಂಪತಿ‌ ಮತ್ತು ನಿರಂಜನ್ ಅವರು ಸೇರಿ ಈ‌ ಮಹತ್ಕಾರ್ಯವನ್ನು ಹಮ್ಮಿಕೊಂಡಿದ್ದರು.

ಶ್ರೀ ಚಾಮುಂಡೇಶ್ವರಿ ಭಾವಚಿತ್ರವನ್ನು ಇಟ್ಟು ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಿ ಮಹಾ ಮಂಗಳಾರತಿ ಮಾಡಿ ನೈವೇದ್ಯ ಮಾಡಿದ ನಂತರ ಭಕ್ತರಿಗೆ ಪ್ರಸಾದ‌ ವಿನಿಯೋಗ ಮಾಡಲಾಯಿತು.

ವೆಜಿಟೇಬಲ್ ಬಾತ್, ಕೇಸರಿ ಬಾತ್, ಬೆಲ್ಲದ ಕೊಬ್ಬರಿ ಮಿಠಾಯಿ ಅನ್ನು ನೂರಾರು ಮಂದಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.


Share this with Friends

Related Post