Mon. Dec 23rd, 2024

ಮೇಘಾಲಯ ರಾಜ್ಯದ ನೂತನ ರಾಜ್ಯಪಾಲ ಸಿ.ಎಚ್ ವಿಜಯಶಂಕರ್

Share this with Friends

ನವದೆಹಲಿ,ಜು.28: ಮೇಘಾಲಯ ರಾಜ್ಯದ ನೂತನ ರಾಜ್ಯಪಾಲರಾಗಿ ಮಾಜಿ ಸಂಸದರಾದ ಸಿ.ಎಚ್ ವಿಜಯಶಂಕರ್ ಅವರನ್ನು ನೇಮಕ ಮಾಡಲಾಗಿದೆ.

ಇದೊಂದು ಅಚ್ಚರಿಯ ಬೆಳವಣಿಗೆ ಎಂದರೆ
ತಪ್ಪಾಗಲಾರದು.ಏಕೆಂದರೆ 2023 ರ ವಿಧಾನಸಭಾ ಚುನಾವಣೆ ನಂತರ ಸಿ.ಎಚ್. ವಿಜಯಶಂಕರ್ ಅವರು ಎಲ್ಲಿಯೂ‌ ಸುದ್ದಿಯಾಗದೆ ಒಂದು ರೀತಿ ನೇಪತ್ಯಕ್ಕೆ ಸರಿದಂತಿದ್ದರು.

ಮೈಸೂರಿನಿಂದ ಎರಡು ಬಾರಿ ಸಂಸದರಾಗಿದ್ದ ಅವರು ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸಿ.ಎಚ್. ವಿಜಯಶಂಕರ್ ಅವರನ್ನು ಮೇಘಾಲಯದ ನೂತನ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಿಸಿದ್ದು ಬಿಜೆಪಿಗರಿಗೇ‌ ಅಚ್ಚರಿ ಮೂಡಿಸಿರಬಹುದು.

ಮೈಸೂರಿನಿಂದ ಎರಡು ಬಾರಿ ಸಂಸದರಾಗಿದ್ದ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಪ್ರತಿನಿಧಿಸಿದ್ದರು.

ಮೈಸೂರಿನ ಕುರುಬ ಸಮುದಾಯದ ನಾಯಕ ವಿಜಯಶಂಕರ್ ಅವರು 1998 ಮತ್ತು 2004 ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿಯಿಂದ‌ ಸ್ಪರ್ಧಿಸಿ ಗಿದ್ದಿದರು. 2014ರ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಹೆಚ್. ಡಿ. ದೇವೇಗೌಡರ ವಿರುದ್ಧ ಸೋಲನುಭವಿಸಿದರು.

ಅದೇನಾಯಿತೋ ಏನೊ 2017ರಲ್ಲಿ ಬಿಜೆಪಿ ತೊರೆದು ನಂತರ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮೈಸೂರಿನಿಂದ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದರು.ಆದರೂ ಬಿಜೆಪಿಯ ಪ್ರತಾಪ್ ಸಿಂಹ ವಿರುದ್ಧ 1.38 ಲಕ್ಷ ಮತಗಳಿಂದ ಸೋಲನುಭವಿಸಬೇಕಾಯಿತು.

ಕಾಂಗ್ರೆಸ್ ನಲ್ಲಿ ಕಡೆಗಣಿಸಲಾಯಿತೆಂದು ಬೇಸರಗೊಂಡು ನವೆಂಬರ್ 2019ರಲ್ಲಿ ಮತ್ತೆ ಬಿಜೆಪಿ ಗೆ ವಿಜಯಶಂಕರ್ ಮರಳಿದರು. 2023 ರ ವಿಧಾನಸಭಾ ಚುನಾವಣೆಯಲ್ಲಿ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿ ನೇಪತ್ಯಕ್ಕೆ ಸರಿದಂತಾಗಿದ್ದರು.

ಸಚಿವರಾಗಿ,ಸಂಸದರಾಗಿದ್ದಲ್ಲದೆ 2010 ರಿಂದ 2016 ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರೂ ಆಗಿದ್ದರು.ಅವರ ಅನುಭವವನ್ನು ಗಣನೆಗೆ ತೆಗೆದುಕೊಂಡು ಬಿಜೆಪಿ ಹೈ ಕಮಾಂಡ್ ಈ ಹುದ್ದೆ ನೀಡಿರಬಹುದು ಅಥವಾ ಅವರು ಕುರುಬ ಜನಾಂಗದ‌ ನಾಯಕ ಎಂದು ಕೊಂಡು ಈ ಪ್ರಮುಖ ಹುದ್ದೆ ನೀಡಿರಬಹುದು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.


Share this with Friends

Related Post