Sun. Apr 20th, 2025

ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯ;ಕಾಂಗ್ರೆಸ್ ಆರೋಪಕ್ಕೆ ಹೆಚ್ ಡಿ ಕೆ ಕಿಡಿ

Share this with Friends

ಮೈಸೂರು, ಜು.28: ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ 60ಸಾವಿರ ಕೋಟಿ ಇಟ್ಟಿದ್ದಾರೆ,ಆದರೆ ಸಿಎಂ ಸೇರಿ ಕಾಂಗ್ರೆಸ್ ನಾಯಕರು ಅನ್ಯಾಯ ಆಗಿದೆ ಎಂದು ಆರೋಪಿಸಿದ್ದಾರೆ ಇದು ಸರಿಯಲ್ಲಾ ಎಂದು ಕೇಂದ್ರ ಸಚಿವ‌ ಹೆಚ್. ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ ಡಿ ಕೆ,ಕೇಂದ್ರ ಬಜೆಟ್ ನಲ್ಲಿ ಯುವಕರಿಗೆ 3ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.ವಿತ್ತ‌ ಸಚಿವೆ‌ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಕೃಷಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ, ರಾಜ್ಯ ಹೆದ್ದಾರಿಗಳಿಗೆ ಹೆಚ್ಚು ಅನುಧಾನ ಬಿಡುಗಡೆ ಮಾಡಿದ್ದಾರೆ ಆದರೆ ರಾಜ್ಯ ಕಾಂಗ್ರೆಸ್ ನಾಯಕರು ಸುಮ್ಮನೆ ದೂರಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರ ಬಜೆಟ್‌ನಲ್ಲಿ ಎಲ್ಲ ರಾಜ್ಯಗಳಿಗೂ ಆದ್ಯತೆ ನೀಡಲಾಗಿದೆ,ಬಜೆಟ್‌ ಮಂಡನೆ ವೇಳೆ‌ ಸಚಿವರು ಕೇವಲ ಎರಡು ರಾಜ್ಯಗಳ ಹೆಸರು ಹೇಳಿದ್ದಾರೆ ಹಾಗೆಂದ ಮಾತ್ರಕ್ಕೆ ಉಳಿದ ರಾಜ್ಯಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಹೇಳುವುದು ಎಷ್ಟು ಸರಿ ಎಂದು ಕಾರವಾಗಿ ಪ್ರಶ್ನಿಸಿದರು.

ನಾನು ಸಿಎಂ ಆಗಿದ್ದಾಗ ಬಜೆಟ್ ಮಂಡಿಸಿದ್ದೆ,
ಅದನ್ನು ಕಾಂಗ್ರೆಸ್ ಮಂಡ್ಯ ಬಜೆಟ್ ಅಂತ ಆರೋಪಿಸಿತ್ತು ಈಗ ಕೇಂದ್ರ ಬಜೆಟ್ ಗೂ ರಾಗ ತೆಗೆದಿದ್ದಾರೆ ಎಂದು ಆಕ್ರೋಶ ಪಟ್ಟರು ಕುಮಾರಸ್ವಾಮಿ.

ಈಗ ಕೇಂದ್ರ ಬಜೆಟ್‌ನಲ್ಲಿ ಆಂಧ್ರಕ್ಕೆ ಪೋಲಾವರಮ್ ಅಣೆಕಟ್ಟು ಯೋಜನೆ ಇದೆ.
ಅದು ಚಂದ್ರಬಾಬು ನಾಯ್ಡು ಸಿಎಂ ಆಗಿದ್ದಾಗ ರೂಪುಗೊಂಡ ಯೋಜನೆ ಅದಕ್ಕಾಗಿ ಹಣ ನೀಡಲಾಗಿದೆ,
ನೇಪಾಳದಲ್ಲಿ ಮಳೆಯಾದಾಗ ಬಿಹಾರದಲ್ಲಿ ಪ್ರವಾಹ ಬರುತ್ತೆ ಹಾಗಾಗಿ ವಿಶೇಷ ಪ್ಯಾಕೇಜ್ ನೀಡಲಾಗಿದೆ,ಲಕ್ಷ ಕೋಟಿ ರೂ. ಅನುದಾನದಲ್ಲಿ ಕ್ಯಾಪಿಟಲ್ ಎಕ್ಸ್‌ಪೆಂಡೀಚರ್‌ಗೆ 11 ಲಕ್ಷ ಕೋಟಿ ರೂ. ನಿಗದಿ ಆಗಿದೆ ಎಂದು ಬಜೆಟ್ ಸಮರ್ಥಿಸಿಕೊಂಡರು.

ಟ್ಯಾಪ್ ವಾಟರ್ ಕೆಲಸಕ್ಕೆ ಕರ್ನಾಟಕಕ್ಕೆ 53 ಲಕ್ಷ ಕೊಟ್ಟಿದ್ದಾರೆ ನಾನು ಕೇಂದ್ರ ಸರ್ಕಾರ ಕ್ಕೆ ಹೋಗಿ ಒಂದು ತಿಂಗಳಷ್ಟೇ ಆಗಿದೆ,
ನಾನು ಸಭೆ ಕರೆದರೆ ಯಾರು ಅಧಿಕಾರಿಗಳು ಹೋಗಬೇಡಿ ಎಂದು ಸುತೋಲೆ ಹೊರಡಿಸಿದ್ದಾರೆ ಎಂದು ಹೆಚ್ ಡಿ ಕೆ ವಾಗ್ದಾಳಿ ನಡೆಸಿದರು.

ಮೇಕೆದಾಟು ಯೋಜನೆ ಕುರಿತು
ನಾನು ಮತ್ತು ದೇವೇಗೌಡರು ಪ್ರಧಾನಿ ಯನ್ನ ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ ಸಧ್ಯದಲ್ಲೇ
ದೇವೇಗೌಡರು ನೀರಾವರಿ ಸಚಿವರನ್ನ ಭೇಟಿ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.


Share this with Friends

Related Post