Mon. Dec 23rd, 2024

ಪೌಷ್ಟಿಕಾಂಶ ತುಂಬಿರುವ ಹಣ್ಣು, ತರಕಾರಿ ಸೇವಿಸಿ: ಪ್ರಕಾಶ್ ಪ್ರಿಯದರ್ಶನ್ ಸಲಹೆ

Share this with Friends

ಮೈಸೂರು, ಜು.29:ನಮ್ಮಆರೋಗ್ಯಕ್ಕೆ ಅಗತ್ಯವಾದ ಪೌಷ್ಟಿಕಾಂಶ ತುಂಬಿರುವ ಹಣ್ಣು, ತರಕಾರಿ ಸೇವಿಸಬೇಕೆಂದು ಮೈಸೂರು ನಗರ ಜೆ.ಡಿ.ಎಸ್. ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ತಿಳಿಸಿದರು.

ಆಯಾ ಋತುಮಾನಗಳಲ್ಲಿ ಪ್ರಕೃತಿದತ್ತವಾಗಿ ಸಿಗುವ ಹಣ್ಣು, ಹಂಪಲು, ತರಕಾರಿಗಳನ್ನು ಹೆಚ್ಚು ಸೇವಿಸಬೇಕು ಅವುಗಳಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಎಲ್ಲ ಪೌಷ್ಟಿಕಾಂಶಗಳು ಇರುತ್ತದೆ ಎಂದು ಹೇಳಿದರು.

ನಗರದ ಶ್ರೀರಾಂಪುರ 2ನೇ ಹಂತದಲ್ಲಿರುವ ಮರ್ಸಿ ಕಾನ್ವೆಂಟ್ ನ ಕಿವುಡ ಮೂಗ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದಿಂದ ಹಣ್ಣುಗಳನ್ನು ವಿತರಿಸಿ ಮಕ್ಕಳಲ್ಲಿ ಪೌಷ್ಟಿಕಾಂಶವುಳ್ಳ ಆಹಾರದ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಕೃತಿ ದತ್ತವಾಗಿ ಸಿಗುವ ಹಣ್ಣು, ತರಕಾರಿಗಳಲ್ಲದೆ ಋತುಮಾನಕ್ಕೆ ತಕ್ಕಂತೆ ಸಿಗುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಇದರಿಂದ ನಮ್ಮ ದೈಹಿಕ ಬೆಳವಣಿಗೆ, ವಿಕಾಸ, ರೋಗ ನಿರೋಧಕ
ಶಕ್ತಿ ಹೆಚ್ಚುತ್ತದೆ,ಎಲ್ಲರೂ ಪ್ರಕೃತಿ ಪರಿಸರದೊಂದಿಗೆ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.

ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಮಾತನಾಡಿ,ಬಿಸಿಯೂಟ ಯೋಜನೆ, ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿ ವಿತರಣೆಯಂತಹ ಸರಕಾರದ ಯೋಜನೆ, ಉಚಿತ ಲಸಿಕೆ ಹಾಕುವ ಕ್ರಮಗಳು, ಮಕ್ಕಳನ್ನು ಆರೋಗ್ಯವನ್ನಾಗಿಸಲು ಸಹಾಯಕವಾಗಿವೆ ಎಂದು ಹೇಳಿದರು.

ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿ ಕೊಳ್ಳಲು ನಾವು ಪೌಷ್ಟಿಕ ಆಹಾರ ಸೇವನೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮರ್ಸಿ ಕಾನ್ವೆಂಟ್ ನ ಸಿಸ್ಟರ್ ಮರಿಯ, ಕೆ.ಆರ್. ಕ್ಷೇತ್ರದ ಬಿ.ಜೆ.ಪಿ. ಕಾರ್ಯದರ್ಶಿ ಬೈರತಿ ಲಿಂಗರಾಜ್,ವರುಣ ಮಹದೇವ್, 65ನೇ ವಾರ್ಡಿನ ಜೆ.ಡಿ.ಎಸ್ ಅಧ್ಯಕ್ಷ ಶ್ರೀಧರ್, ವೀರಭದ್ರ ಸ್ವಾಮಿ, ಸುಬ್ರಮಣ್ಯ, ಛಾಯಾ, ಯಶವಂತ್ ಕುಮಾರ್, ಮಹೇಶ್, ಮಹದೇವ್,ಎಸ್‌.ಪಿ. ಅಕ್ಷಯ ಪ್ರಿಯಾದರ್ಶನ್,ಹರ್ಷಿತ್ ಮತ್ತಿರರು ಉಪಸ್ಥಿತರಿದ್ದರು.


Share this with Friends

Related Post