ಮಂಡ್ಯ,ಜು.29: ಕಾವೇರಿ ನಮ್ಮೆರ ಜೀವನದಿ,
ಪ್ರತಿವರ್ಷ ಕನ್ನಂಬಾಡಿ ಕಟ್ಟೆ ತುಂಬಲಿ ಅನ್ನೋದು ನಮ್ಮ ಪ್ರಾರ್ಥನೆ,ಆದರೆ
ಪ್ರಕೃತಿ ವಿಕೋಪದಿಂದ ಹಲವು ಬಾರಿ ತುಂಬಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೋಮವಾರ ಬೆಳಿಗ್ಗೆ ಅಬಿಜಿನ್ ಲಗ್ನದಲ್ಲಿ ಜನರ ಜೀವನಾಡಿ ಕನ್ನಂಬಾಡಿ ಕಟ್ಟೆಗೆ ಬಾಗಿನ ಸಮರ್ಪಿಸಿದ ನಂತರ ಸಿಎಂ ಮಾತನಾಡಿದರು.
ನಾನು ಇದು ಮೂರನೇ ಬಾರಿ ಕಾವೇರಿ ನದಿಗೆ ಬಾಗೀನ ಅರ್ಪಿಸುತ್ತಿದ್ದೇನೆ,
ರಾಜ್ಯದಲ್ಲಿ ಕಾವೇರಿ ಜಲಾನಯನ ಪ್ರದೇಶದನ 4 ಜಲಾಶಯಗಳು ತುಂಬಿವೆ,
ಒಟ್ಟು 114 ಟಿಎಂಸಿ ನೀರಿನಿಂದ ಬೆಳೆ ಬೆಳೆಯುವ ಕೆಲಸ ಮಾಡುತ್ತೇವೆ,
ನಮ್ಮ ಸರ್ಕಾರದ ನಾಲೆಗಳ ಆಧುನಿಕರಣ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.
ರಾಜಕೀಯ ಲಾಭಕ್ಕಾಗಿ ತಮಿಳನಾಡು ಕ್ಯಾತೆ ತೆಗೆಯುತ್ತಿದೆ,ಈಗಾಗಲೇ 83 ಟಿಎಂಸಿಗೂ ಹೆಚ್ಚು ನೀರು ಹರಿದು ಹೋಗಿದೆ,
ಈ ವರ್ಷ ಹೆಚ್ಚು ನೀರು ಹೋಗುತ್ತದೆ ಎಂದರು.
ಕೇಂದ್ರ ಮೇಕೆದಾಟುಗೆ ಮಂಜುರಾತಿ ಕೊಟ್ಟಿಲ್ಲ ಹಾಗಾಗಿ ವಿರೋಧ ಪಕ್ಷದವರು,
ಮಂಡ್ಯ ಸಂಸದರು ಮೇಕೆದಾಟಿಗೆ ಗಲಾಟೆ ಮಾಡಬೇಕು,ಮೇಕೆದಾಟು ಯೋಜನೆಗೆ ಕೇಂದ್ರದಲ್ಲಿ ಅನುಮೋದನೆ ಕೊಡಿಸಬೇಕು ಎಂದು ಸಿಎಂ ಹೇಳಿದರು.
ಮೇಕೆದಾಟುನಲ್ಲಿ 65 ಟಿಎಂಸಿ ನೀರು ಸಂಗ್ರಹಿಸಿದರೆ ವಿದ್ಯುತ್ ಉತ್ಪಾನೆ ಮಾಡಬಹುದು, ಬೆಂಗಳೂರಿಗೂ ನೀರು ಕೊಟ್ಟು ಹಚ್ಚುವರಿ ನೀರನ್ನ ತಮಿಳುನಾಡಿಗೂ ಕೊಡಬಹುದು ಇದಕ್ಕೆ ಅನಗತ್ಯ ತಕರಾರು ಮಾಡುತ್ತಿದ್ದಾರೆ ಎಂದು ಬೇಸರ ಪಟ್ಟರು ಸಿಎಂ.
ಕರ್ನಾಟಕದ ಲೋಕಸಭಾ ಸದಸ್ಯರು ಒಂದು ದಿನ ಮಾತಾಡಿಲ್ಲ,
ಕರ್ನಾಟಕಕ್ಕೆ ಅನ್ಯಾಯ ಆಗಿರೋದನ್ನ ಮಾತನಾಡೋದು ಬಿಟ್ಟು ಕೆಲಸಕ್ಕೆ ಬಾರದ ವಿಚಾರ ಮಾತಾಡ್ತಾರೆ ಎಂದು ಸಿದ್ದು ಟೀಕಿಸಿದರು.
ಕೇಂದ್ರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಒಂದು ರೂಪಾಯಿ ಕೊಟ್ಟಿಲ್ಲ,ಆದರೆ
ರಾಜ್ಯಕ್ಕೆ ಸಂಬಂಧಿಸಿದ ವಿಚಾರವನ್ನು ಸಂಸದರು ಪ್ರಸ್ತಾಪ ಮಾಡಲೇ ಇಲ್ಲ.
ಪ್ರತಿ ಪಕ್ಷದವರು ಸುಳ್ಳು ಹೇಳಿ ಜನರ ತಪ್ಪುದಾರಿಗೆ ಎಳೆಯುವ ಕೆಲಸ ಮಾಡುತ್ತಾರೆ
ಸರ್ಕಾರ ದುರ್ಬಲ ಮಾಡುವ ಕೆಲಸ ಮಾಡುತ್ತಿದ್ದಾರೆ,ಬಿಜೆಪಿ ಜೆಡಿಎಸ್ ನವರು ಮನೆ ಮುರುಕರು,ಅವ್ರು ಒಟ್ಟಾಗಿದ್ದಾರೆ,
ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಸಿಬಿಐ ಕೊಡಿ ಅಂದ್ರೆ ಚೋರ್ ಬಜಾವ್ ಅಂತಿದ್ರು ಈಗ ಮಾತೆತ್ತಿದರೆ ಸಿಬಿಐ ಅಂತಾರೆ ಎಂದು ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದರು.