Mon. Dec 23rd, 2024

ಹವಾಮಾನ ವೈಪರೀತ್ಯದಿಂದ ಇಡೀ ವಿಶ್ವವೆ‌ ದೊಡ್ಡ ಬೆಲೆ ತೆರುತ್ತಿದೆ: ಜಿ.ಟಿ. ದೇವೇಗೌಡ

Share this with Friends

ಮೈಸೂರು,ಜು.29: ಹವಾಮಾನ ವೈಪರೀತ್ಯಕ್ಕೆ ಇಂದು ಇಡೀ ವಿಶ್ವವೆ‌ ಬಹು ದೊಡ್ಡ ಬೆಲೆ ತೆರುತ್ತಿದೆ ಶಾಸಕ ಜಿ.ಟಿ. ದೇವೇಗೌಡ ವಿಷಾದಿಸಿದರು.

ನಗರದ ಎಚ್ ಡಿ ಕೋಟೆ ರಸ್ತೆಯಲ್ಲಿರುವ ಪೂರ್ಣ ಚೇತನ ಶಾಲೆಯಲ್ಲಿ 944 ಇಕೋಬ್ರಿಕ್ಸ್ ತಯಾರಿ ಹಾಗೂ 10,777 ಗ್ರೋ ಬ್ಯಾಗ್ ಗಳಲ್ಲಿ ಬೀಜ ಭಿತ್ತನೆ ಮೂಲಕ ವಿಶ್ವ ದಾಖಲೆ ನಿರ್ಮಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.

ನಮ್ಮ ಮುಂದಿನ ಜನಾಂಗಕ್ಕೆ ಈ ಜಗತ್ತನ್ನು ಸುರಕ್ಷಿತವಾಗಿ ನೀಡಿ ಹೋಗಬೇಕಾದರೆ, ನಾವು ಪರಿಸರ ಪ್ರಜ್ಞೆ ಬೆಳೆಸಿಕೊಂಡು, ಪರಿಸರಕ್ಕೆ ತಗ್ಗಿ ಬಗ್ಗಿ ನಡೆಯಬೇಕು. ಮಕ್ಕಳಲ್ಲಿ ಎಳವೆಯಿಂದಲೇ ಪರಿಸರ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಹತ್ತನೇ ತರಗತಿವರೆಗಿನ ೫೫೦ ವಿದ್ಯಾರ್ಥಿಗಳು ನಗರದ ಮಾರುಕಟ್ಟೆ ಪ್ರದೇಶಗಳಿಂದ ಸಂಗ್ರಹಿಸಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿಕೊಂಡು 944 ಇಕೋಬ್ರಿಕ್ಸ್ ತಯಾರಿ ಹಾಗು ಅರಣ್ಯ ಇಲಾಖೆ ನಾನಾ ಮರಗಳ ಬೀಜಗಳನ್ನು 10,777 ಗ್ರೋ ಬ್ಯಾಗ್ ಗಳಲ್ಲಿ ಬಿತ್ತುವ ಮೂಲಕ ದಾಖಲೆ ಸೃಷ್ಟಿಸಿದರು.

ಈ ವೇಳೆ ಮಾತನಾಡಿದ ಶಾಲೆಯ ಅಧ್ಯಕ್ಷ ಡಾ.ವಿದ್ಯಾಸಾಗರ್ ಪಿ, ಈ ಇಡೀ ಪ್ರಯತ್ನದ ಮುಖ್ಯ ಉದ್ದೇಶ ಸಮಾಜದ ಸವಾಲುಗಳಿಗೆ ಮನ ಮಿಡಿಯುವ ಪ್ರಜೆಗಳನ್ನು ನಿರ್ಮಿಸಿ, ಭವ್ಯ ಭಾರತದ ಕನಸನ್ನು ನನಸಾಗಿಸುವುದು ಎಂದು ಹೇಳಿದರು.

ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ ಹೀರಾಲಾಲ್ ಮಾತನಾಡಿ, ಇಂತಹ ವಿಶಿಷ್ಟ ಕಾರ್ಯಕ್ರಮ ಆಯೋಜಿಸುವ ಮೂಲಕ ಪೂರ್ಣ ಚೇತನ ಶಾಲೆ, ನಮ್ಮ ಮುಂದಿನ ಜನಾಂಗವನ್ನು ಪರಿಸರ ಪ್ರೇಮಿಗಳನ್ನಾಗಿಸಿ, ಈ ದೇಶದ ಸಂಪತ್ತಾಗಿಸುತ್ತಿದೆ ಎಂದು ಶ್ಲಾಘಿಸಿದರು.

ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ದರ್ಶನ್ ರಾಜ್,
ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಮಾತನಾಡಿದರು.

ಅಮೀತ್ ಕೆ ಹಿಂಗೋರಾಣಿ ಹಿರಿಯ ತೀರ್ಪುಗಾರರಾಗಿದ್ದರು.

ಎಲೈಟ್ ವರ್ಲ್ಡ್ ರೆಕಾರ್ಡ್ಸ್ ಪಿ.ಜಿ. ಪ್ರತಿಬಾ, ಏಷ್ಯನ್ ರೆಕಾರ್ಡ್ಸ್ ಅಕಾಡೆಮಿ ,ಕೆ.ಆರ್ ವೆಂಕಟೇಶ್ವರನ್, ಶಾಲೆಯ ಪ್ರಾಂಶುಪಾಲರಾದ ಪ್ರಿಯಾಂಕಾ ಬಿ, ಡೀನ್ ಲಾವಣ್ಯ ಉಪಸ್ಥಿತರಿದ್ದರು.


Share this with Friends

Related Post