Mon. Dec 23rd, 2024

ಬಿಬಿಎಂಪಿ ಲಾರಿ ಡಿಕ್ಕಿ ಹೊಡೆದು ಇಬ್ಬರು ಸ್ನೇಹಿತರ‌ ದುರ್ಮರಣ

Share this with Friends

ಬೆಂಗಳೂರು,ಜು.29: ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ನೇಹಿತರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆ.ಆರ್​ ಸರ್ಕಲ್​​ ಬಳಿ ನಡೆದಿದೆ.

ಪ್ರಶಾಂತ್ (25) ಮತ್ತು ಶಿಲ್ಪ (25) ಮೃತಪಟ್ಟ ದುರ್ಧೈವಿಗಳು.

ಈ ನತದೃಷ್ಟರು ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು,ಜತೆಗೆ ಇಬ್ಬರೂ ಸ್ನೇಹಿತರಾಗಿದ್ದರು.

ಪ್ರಶಾಂತ್ ಮತ್ತು ಶಿಲ್ಪಾ ಟೆಕ್ಕಿಗಳಾಗಿದ್ದು, ಟಿಸಿಎಸ್​ನಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಜೆ ಹಿನ್ನೆಲೆಯಲ್ಲಿ ಊಟಕ್ಕೆಂದು ಹೊರಗಡೆ ಬಂದಿದ್ದರು. ಈ ವೇಳೆ ಕಸದ ಲಾರಿ ಅಡ್ಡ ಬಂದಿದೆ. ಮೃತರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಬಿಬಿಎಂಪಿ ಕಸದ ಲಾರಿ ಅಪಘಾತದಲ್ಲಿ ನಿನ್ನೆ ರಾತ್ರಿ ಇಬ್ಬರು ಮೃತಪಟ್ಟ ಘಟನೆ ನಡೆದಿದ್ದು ಇದು ದುರಾದೃಷ್ಟಕರ ಎಂದಿದ್ದಾರೆ.

ಬಿಬಿಎಂಪಿ ಮೃತರ ಕುಟುಂಬಗಳಿಗೆ ನೆರವು ಕೊಡಲಿದೆ ಎಂದು ತಿಳಿಸಿದರು.

ಶಿಲ್ಪ ಆಂಧ್ರದ ಹಿಂದುಪುರದವರು ಬೆಂಗಳೂರಿನ‌ ನಾಗವಾರದ ಪಿಜಿಯಲ್ಲಿ ವಾಸವಿದ್ದರು,ಈಕೆಯ ಮದುವೆಗೆ ನಿನ್ನೆ ಬೆಳಿಗ್ಗೆಯಷ್ಟೇ ಮಾತುಕತೆ ನಡೆದಿತ್ತಂತೆ,ಅಷ್ಟರಲ್ಲೇ ಈ ದುರ್ಘಟನೆ ನಡೆದಿದ್ದು ಪೋಷಕರ ದುಃಖದ ಕಟ್ಟೆ ಒಡೆದಿದೆ.

ಶಿಲ್ಪ ಹಾಗೂ ಪ್ರಶಾಂತ್ ಅವರುಗಳ ಮೃತದೇಹ ಬೌರಿಂಗ್ ಆಸ್ಪತ್ರೆಯಲ್ಲಿ ಮಹಜರು ಮಾಡಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ.

ಮೃತ ಪ್ರಶಾಂತ್ ಬಗ್ಗೆ ಹೆಚ್ಚಿನ ವಿವರ ತಿಳಿದು ಬಂದಿಲ್ಲ ಹಕಸೂರು ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡರು.


Share this with Friends

Related Post