ಮೈಸೂರು, ಜು.30: ಮೈಸೂರಿನ ಕಾಕರವಾಡಿಯಲ್ಲಿ ಎಲ್ಲೆಲ್ಲೂ ಹಬ್ಬದ ವಾತಾವರಣ ಮನೆಮಾಡಿದೆ,ಮಕ್ಕಳಿಂದ ಹಿಡಿದು ದೊಡ್ಡವರತನಕ ಸಂಭ್ರಮಿಸುತ್ತಿದ್ದಾರೆ.
ಇದಕ್ಕೆ ಕಾರಣ ಶ್ರೀ ಕುರುಬರ ರಾಮ ಮಂಧಿರದ ವತಿಯಿಂದ ನಡೆಯಲಿರುವ 30 ನೇ ಚಾಮುಂಡೇಶ್ವರಿ ಮಹೋತ್ಸವ.
ಚಾಮುಂಡೇಶ್ವರಿ ಮಹೋತ್ಸವಕ್ಕೆ ಬೆಳಿಗ್ಗೆ ಕೆ.ಆರ್.ಕ್ಷೇತ್ರದ ಶಾಸಕರಾದ ಟಿ.ಎಸ್ ಶ್ರೀವತ್ಸ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶ್ರೀವತ್ಸ ಅವರು ನಾಡಿನ ಅಧಿದೇವತೆ ಉತ್ಸವ ಎಲ್ಲೆಡೆ ನಡೆಯತ್ತದೆ, ಶ್ರೀ ಕುರುಬರ ರಾಮಮಂದಿರ ದ ವತಿಯಿಂದ ಸುಮಾರು 30 ವರ್ಷಗಳಿಂದ ಎಲ್ಲ ವರ್ಗದ ಜನರು ಸೇರಿ ಅನ್ಯೋನ್ಯತೆ ಯಿಂದ ಆಚರಿಸುವುದು ವಿಶೇಷ ಎಂದು ನೆಚ್ಚುಗೆ ವ್ಯಕ್ತಪಡಿಸಿದರು.
ಅಷಾಡ ಮಾಸ ವೆಂದರೆ ಎಲ್ಲರಿಗೂ ಹಬ್ಬದ ವಾತವಾರಣ ನಾಡಿನ ಜನರಿಗೆ ಒಳ್ಳೆಯದಾ ಗಲಿ ಎಂದು ಹಾರೈಸಸಿದರು.
ಬ್ಯಾಂಡ್ ಸೆಟ್, ನಾದ ಸ್ವರದೊಂದಿಗೆ
ನಗಾರಿ ಕುಣಿತ,ಬೊಂಬೆ ಕುಣಿತ, ಡೊಳ್ಳು ಕುಣಿತ,ಗೊರವನ ಕುಣಿತ, ಹುಲಿ ವೇಷ ಕುಣಿತ ದೊಂದಿಗೆ ಮೆರವಣಿಗೆ ಸಾಗಲಿದೆ.
ಈ ವೇಳೆ ಪೂರ್ಣ ಕುಂಬ ಹೋರುವ ಮಕ್ಕಳಿಗೆ ಮಡಿ ಹಾಸುವ ಮೂಲಕ ಚಾಮರಾಜ ಜೋಡಿ ರಸ್ತೆ ಯಲ್ಲಿ ಸಾಗಿ ನಾರಯಣ ಶಾಸ್ತ್ರಿ ರಸ್ತೆ, ಡಿ.ಸುಬ್ಬಯ್ಯ ರಸ್ತೆ ,ದಿವಾನ್ ರಸ್ತೆ, ಕುರುಬಗೇರಿ,ಬಂಡಿಕೇರಿ,
ಕುಂಬಾರ ಗೇರಿ,ರೆಹಮಾನಿಯ ರಸ್ತೆಯಲ್ಲಿ ಸಂಚರಿಸಿದ ನಂತರ ಚಾಮುಂಡೇಶ್ವರಿ ತಾಯಿಯ ಪ್ರತಿಷ್ಟಾಪನೆ ಮಾಡಲಾಗಿದೆ
ಉತ್ಸವಕ್ಕೆ ಚಾಲನೆ ನೀಡಿದ ವೇಳೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮಹಾ ಪೌರ ಶಿವಕುಮಾರ್, ಕುರುಬರ ರಾಮಮಂದಿರದ ಅಧ್ಯಕ್ಷ ಎಂ.ಸ್ವಾಮಿ, ಚಾಮುಂಡೇಶ್ವರಿ ಉತ್ಸವ ಸಮಿತಿ ಅಧ್ಯಕ್ಷ ಎಂ.ಕುಮಾರ್, ಮೊಹಲ್ಲಾ ಮುಖಂಡರು ಗಳಾದ ಜೋಗಿ ಮಂಜು,ಅಭಿ,ರಾಜಣ್ಣ,
ನಾಗೇಶ್,ರಂಗನಾಥ, ಮಹದೇವ್,
ಪುಟ್ಟಮಾದು, ಅಟೊ ಮಂಜು,
ಹರೀಶ್,ಸಂಪತ್ ಮತ್ತಿತರರು ಹಾಜರಿದ್ದರು.