Mon. Dec 23rd, 2024

ಶಿರಾಡಿ ಘಾಟಿಯಲ್ಲಿ ಭೂ ಕುಸಿತ: ಮಣ್ಣಿನಡಿ ವಾಹನಗಳು

Share this with Friends

ಹಾಸನ,ಜು.30: ಸತತ ಮಳೆಯಿಂದಾಗಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯ ದೊಡ್ಡತಪ್ಲೆ ಬಳಿ ಭೂಕುಸಿತವಾಗಿದೆ.

ದೊಡ್ಡತಪ್ಲೆ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮತ್ತೆ ಭಾರೀ ಭೂಕುಸಿತ ಸಂಭವಿಸಿದ್ದು, ಮಣ್ಣಿನ ಕೆಳಗೆ ಒಂದು ಟ್ಯಾಂಕರ್ ಸೇರಿದಂತೆ 6 ವಾಹನಗಳು ಸಿಲುಕಿದ್ದು ಅವುಗಳನ್ನು ಹೊರ‌ ತೆಗೆಯಲು ಕಾರ್ಯಾಚರಣೆ ನಡೆದಿದೆ.

ಕಳೆದ 15 ದಿನಗಳಿಂದಲೂ ಈ ಪ್ರದೇಶದಲ್ಲಿ ಭೂ ಕುಸಿತವಾಗುತ್ತಲೇ ಇದೆ,ಆದರೆ ಇಂದು ದುಡ್ಡ ಪ್ರಮಾಣದಲ್ಲಿ ಮಣ್ಣು ಕುಸಿದ ಕಾರಣ ವಾಹನಗಳು ಮಣ್ಣಿನಲ್ಲಿ ಸಿಲುಕಿವೆ.

ಇನ್ನೊಂದೆಡೆ ಮತ್ತಷ್ಟು ಮಣ್ಣು ಕುಸಿಯುವ ಆತಂಕ ಸೃಷ್ಟಿಯಾಗಿದ್ದು, ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ,ಜನ‌ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.


Share this with Friends

Related Post