Mon. Dec 23rd, 2024

ಮೈಸೂರಿಗೆ ನಿರಾಶೆ ಮೂಡಿಸಿದ ಬಜೆಟ್

Share this with Friends

ಮೈಸೂರು, ಫೆ.16: ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯವರೇ ಆಗಿದ್ದರೂ ಬಜೆಟ್‌ನಲ್ಲಿ ಏನನ್ನು ನೀಡದೆ ನಿರಾಶೆ ಮೂಡಿಸಿದ್ದಾರೆ ಎಂದು ಶಾಸಕ ಶ್ರೀವತ್ಸ ಬೇಸರ ಪಟ್ಟಿದ್ದಾರೆ.

ಕೇಂದ್ರಸರ್ಕಾರವನ್ನು ಟೀಕಿಸುವುದಕ್ಕಷ್ಟೇ ಮೀಸಲಾದ ಬಜೆಟ್ ಪ್ರತಿಯಾಗಿದೆ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಟೀಕಿಸಿದ್ದಾರೆ.

ಪಂಚ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸಲು ಪರದಾಡುತ್ತಿರುವ ಆರ್ಥಿಕ ಖಾತೆ ಹೊತ್ತ ಸಿಎಂ, ನೀರಾವರಿ,ಗ್ರಾಮೀಣಾಭಿವೃದ್ಧಿ ಮೊದಲಾದ ಕ್ಷೇತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಸಬ್ ಕಾ ಸಾಥ್ ಸಬ್ ವಿಕಾಸ್ ಮಾದರಿಯಡಿ ಬಜೆಟ್ ಮಂಡಿಸಿದ್ದರೆ, ಈ ಸರ್ಕಾರ ಯಾವುದೇ ವರ್ಗಗಳ ಅಭಿವೃದ್ಧಿಗೂ ಗಮನಹರಿಸಿಲ್ಲ.

ಬರೀ ಪುಸ್ತಕದಲ್ಲಿ ಯೋಜನೆಗಳನ್ನು ಪ್ರಕಟಿಸಲಾಗಿದೆಯೇ ಹೊರತು ಕಾರ್ಯರೂಪಕ್ಕೆ ಬರುವಂತದ್ದು ಅಲ್ಲ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುವ ಬಗ್ಗೆ ಅನುದಾನ ಪ್ರಸ್ತಾಪಿಸಿಲ್ಲ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ೨೦೦ ಕೋಟಿ ರೂ.ಅನುದಾನ ಮೀಸಲಿಡುವಂತೆ ಪ್ರಸ್ತಾಪ ಮಾಡಿದ್ದರೂ ಬರೀ ಅಭಿವೃದ್ಧಿ ಅಂತ ಹೇಳಿ ಮೈಸೂರಿಗರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಬರಗಾಲ ನಿರ್ವಹಣೆ ಮಾಡುವುದಕ್ಕೆ ಸಾಧ್ಯವಾಗದೆ ಇರುವ ಈ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ಸಾಧ್ಯವೆ ಎಂದು ಶ್ರೀವತ್ಸ ಪ್ರಶ್ನಿಸಿದ್ದಾರೆ.


Share this with Friends

Related Post