ಮೈಸೂರು,ಆಗಸ್ಟ್.1: ಕಾವೇರಿ,ಕಪಿಲೆ ಭೋರ್ಗರೆದು ಹರಿಯುತ್ತಿದ್ದು, ಟಿ.ನರಸೀಪುರ ತಾಲೂಕು ತಲಕಾಡು ಹೋಬಳಿಯ ನದಿ ತಟದ ತಡಿಮಾಲಂಗಿ ಗ್ರಾಮ ಸಂಪೂರ್ಣ ಜಲಾವೃತವಾಗಿದೆ.
ಹಾಗಾಗಿ ಗ್ರಾಮದಲ್ಲಿ ಜನಜೀವನ ಪೂರ್ಣ ಅಸ್ತವ್ಯಸ್ಥವಾಗಿದೆ. ದೈನಂದಿನ ಕೆಲಸ ಕಾರ್ಯಗಳು ಸ್ಥಗಿತವಾಗಿದೆ.ಗ್ರಾಮದ ರಸ್ತೆಗಳು ಜಲಾವೃತವಾಗಿದೆ.
ಗ್ರಾಮದ ಬಹುತೇಕ ಜನರನ್ನು ಕಾಳಜಿ ಕೇಂದ್ರಕ್ಕೆ ಜಿಲ್ಲಾಡಳಿತ ಸ್ಥಳಾಂತರಿಸಿದ್ದು,
ಸಮರೋಪಾದಿಯಲ್ಲಿ ನಿರಾಶ್ರಿತರ ನೆರವಿಗೆ ಧಾವಿಸಿದೆ.ಅಲ್ಲಲ್ಲಿ ಕಾಳಜಿ ಕೇಂದ್ರಗಳನ್ನ ಸ್ಥಾಪಿಸಿ ನಿರಶ್ರಿತರಿಗೆ ನೆರವಾಗಿದ್ದಾರೆ.
ನಿನ್ನೆ ನಿರಾಶ್ರಿತರ ಕಾಳಜಿ ಕೇಂದ್ರಕ್ಕೆ ಸರ್ಕಾರದ ವಿಪ್ಪತ್ತು ನಿರ್ವಹಣೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ರವರು ಭೇಟಿ ನೀಡಿ ಸಮಸ್ಯೆಗಳನ್ನ ಆಲಿಸಿದ್ದಾರೆ.
ರಶ್ಮಿ ಮಹೇಶ್ ಅವರಿಗೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ,ಉಪವಿಭಾಗಾಧಿಕಾರಿ ಎಸ್.ರಕ್ಷಿತ್,ತಾಲೂಕು ದಂಡಾಧಿಕಾರಿ ಸುರೇಶ್ ಆಚಾರ್,ಇಒ ಕೃಷ್ಣ ಸಾಥ್ ನೀಡಿದರು.
ನಿರಾಶ್ರಿತರ ಸಂಕಷ್ಟಕ್ಕೆ ಜಿಲ್ಲಾಡಳಿತ ಸಂಪೂರ್ಣ ನೆರವು ನೀಡಲಿದೆ ಎಂದು ಭರವಸೆ ನೀಡಲಾಯಿತು.