Mon. Dec 23rd, 2024

ಪಂಪ್ ಹೌಸ್ ಗೆ ಜಲದಿಗ್ಬಂಧನ:ನಂಜನಗೂಡಲ್ಲಿ ಕುಡಿಯುವ ನೀರಿಗೂ‌ ಸಂಕಷ್ಟ

Share this with Friends

ನಂಜನಗೂಡು,ಆಗಸ್ಟ್.1: ಕೇರಳದ ವೈನಾಡು ಪ್ರದೇಶದಲ್ಲಿ ಭಾರಿ ಮಳೆ ಹಿನ್ನಲೆ ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು,ನಂಜನಗೂಡು ಜಲಮಯವಾಗಿದೆ.

ಈಗಾಗಲೇ 70 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಕಪಿಲಾ ನದಿಗೆ ಬಿಡುಗಡೆ ಮಾಡಲಾಗಿದೆ.ಮಳೆ ಪ್ರಮಾಣ ಹೆಚ್ಚಾದ ಹಿನ್ನಲೆ ಬಿಡುಗಡೆ ಪ್ರಮಾಣ 80 ಸಾವಿರ ಕ್ಯೂಸೆಕ್ಸ್ ದಾಟುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚು ನೀರು ಹರಿದು ಬರುತ್ತಿರುವುದರಿಂದ
ನಂಜನಗೂಡಿನ ತಗ್ಗು ಪ್ರದೇಶಗಳು ಜಲಾವೃತವಾಗಿವೆ.

ನಗರಕ್ಕೆ ಪ್ರತಿದಿನ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ದೇಬೂರು ಗ್ರಾಮದ ಬಳಿಯ ಕುಡಿಯುವ ನೀರಿನ ಸರಬರಾಜು ಪಂಪ್ ಹೌಸ್ ಜಲ‌ ದಿಗ್ಬಂಧನವಸಗಿದೆ.

ಇದರಿಂದಾಗಿ ನಂಜನಗೂಡು ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜು ವ್ಯತ್ಯಯವಾಗಿದೆ.

ಈಗಾಗಲೇ ನಂಜುಂಡೇಶ್ವರ ದೇವಾಲಯದ ಸ್ಥಾನಘಟ್ಟ,ಹದಿನಾರು ಕಾಲು ಮಂಟಪ, ಪರಶುರಾಮ ದೇವಾಲಯ,ಅಯ್ಯಪ್ಪ ಸ್ವಾಮಿ ದೇವಾಲಯ, ಚಾಮುಂಡೇಶ್ವರಿ ದೇವಾಲಯ,ತೋಪಿನ ಬೀದಿ, ಒಕ್ಕಲಗೇರಿ,
ಹಳ್ಳದ ಕೇರಿ ಸೇರಿದಂತೆ ಸಾಕಷ್ಟು ಬಡಾವಣೆಗಳಿಗೆ ಪ್ರವಾಹದ ನೀರು ನುಗ್ಗಿದ್ದು,ನಂಜನಗೂಡಿನ ಜನ ಆತಂಕದಲ್ಲಿದ್ದಾರೆ.


Share this with Friends

Related Post