Mon. Dec 23rd, 2024

ಅಪರಿಚಿತನಿಗೆ ಲಿಫ್ಟ್ ಕೊಡಲು ಹೋದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ

Share this with Friends

ಮೈಸೂರು,ಆಗಸ್ಟ್.1: ಅಪರಿಚಿತನ ಅಸಹಾಯಕತೆಗೆ ಮರುಗಿ ಲಿಫ್ಟ್ ಕೊಡಲು ಹೋದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಬೋಗಾದಿ ರಿಂಗ್ ರಸ್ತೆ ಬಳಿ ಈ ಘಟನೆ ನಡೆದಿದೆ.

ಚಾಮರಾಜನಗರ ಮೂಲದ ಶಿವು ಎಂಬುವರು ಹಲ್ಲೆಗೊಳಗಾಗಿದ್ದು,ಗಂಭೀರ ಗಾಯಗೊಂಡಿರುವ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿ ವೇಳೆ‌ ನಿರ್ಗತಿಕರು,ಭಿಕ್ಷುಕರು,
ಅಸಹಾಯಕರಿಗೆ ಬೆಡ್ ಶೀಟ್ ಗಳನ್ನ ನೀಡಿ ಮಾನವೀಯತೆ ಮೆರೆಯುವ ಶಿವು ಅವರು ಎರಡು ದಿನಗಳ ಹಿಂದೆ ಬೋಗಾದಿ ರಿಂಗ್ ರಸ್ತೆಯ ಸೌಪರ್ಣಿಕ ಅಪಾರ್ಟ್ ಮೆಂಟ್ ಬಳಿ ರಾತ್ರಿ 11 ಗಂಟೆ ವೇಳೆ ತಮ್ಮ ಬೈಕ್ ನಲ್ಲಿ ತೆರಳುತ್ತಿದ್ದರು.

ಆಗ ಅಪರಿಚಿತ ವ್ಯಕ್ತಿಯೊಬ್ಬ ಅಸಹಾಯಕನಾಗಿ ಕಂಡು ಬಂದಿದ್ದಾನೆ.ನೋಡಲು ಭಿಕ್ಷುಕನಂತೆ ಕಂಡು ಬಂದರೂ ಶಿವು ಆತನ ನೆರವಿಗೆ ಮುಂದಾಗಿದ್ದಾರೆ.

ವ್ಯಕ್ತಿಗೆ ತಮ್ಮ ಬೈಕ್ ನಲ್ಲಿ ಲಿಫ್ಟ್ ಕೊಡಲು ಯತ್ನಿಸಿದ್ದಾರೆ.ಶಿವು ಅವರ ಮನವಿಯನ್ನ ಅಪರಿಚಿತ ವ್ಯಕ್ತತಿರಸ್ಕರಿಸಿದ್ದಾನೆ.

ಮಾನವೀಯತೆಯಿಂದ ಮತ್ತೆ ಬೈಕ್ ಹತ್ತುವಂತೆ ಕರೆದಿದ್ದಾರೆ.ಈ ವೇಳೆ ಅಪರಿಚಿತ ವ್ಯಕ್ತಿ ತನ್ನ ಬಳಿ ಇದ್ದ ಆಯುಧದಿಂದ ಶಿವು ಮೇಲೆ ಹಲ್ಲೆ ನಡೆಸಿದ್ದಾನೆ.

ಶಿವು ಅವರ ಕೂಗಾಟ ಕೇಳಿ ಕೆಲವರು ನೆರವಿಗೆ ಬಂದಿದ್ದಾರೆ.ಆಗ ಹಲ್ಲೆ ನಡೆಸಿದ ವ್ಯಕ್ತಿ ಓಡಿ ಹೋಗಿದ್ದಾನೆ.

ಸರಸ್ವತಿಪುರಂ ಠಾಣೆ ಪೊಲೀಸರು ಈ ಸಂಭಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post