Mon. Dec 23rd, 2024

ಉದ್ಯಮಿ ಎಂ ಪಿ ರಾಜೇಶ್ ರವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ

Share this with Friends

ಮೈಸೂರು,ಆಗಸ್ಟ್.1: ದುರ್ಗಾಪೌಂಡೇಶನ್ 5ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ
ಉದ್ಯಮಿ ಎಂ ಪಿ ರಾಜೇಶ್ ಅವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೆಂಗಳೂರುನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆದ
ದುರ್ಗಾಪೌಂಡೇಶನ್ 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ
ವಿವಿಧ ಜಿಲ್ಲೆಯಲ್ಲಿ ಸಾಧನೆಗೈದ ಸಾಧಕರಿಗೆ ಕರ್ನಾಟಕ ಸೇವಾ ರತ್ನ 2024ರ ಪ್ರಶಸ್ತಿಯನ್ನು ಕೊಡಮಾಡಲಾಯಿತು.

ಮೈಸೂರು ಲಕ್ಷ್ಮಿಪುರಂ ನಿವಾಸಿ, ಉದ್ಯಮಿ ಎಂ ಪಿ ರಾಜೇಶ್ ಪಳನಿ ಅವರಿಗೆ ಸಾಮಾಜಿಕ ಕ್ಷೇತ್ರದಿಂದ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ಯನ್ನು ಸಂಗೀತ ಕಲಾವಿದ ಶಶಿಧರ್ ಕೋಟೆ ಪ್ರಶಸ್ತಿ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಫೌಂಡೇಷನ್ ಅಧ್ಯಕ್ಷೆ ರೇಖಾ ಶ್ರೀ ನಿವಾಸ್,
ಸಮಾಜ ಸೇವಕಿ ಮಮತಾ ದೇವರಾಜ್, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್, ರೂಪದರ್ಶಿ ಶೋಭಾ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಹಾಗೂ ಮುತ್ತಣ್ಣ,ಬಿಬಿಎಂಪಿ ಮುಖ್ಯ ಆಯುಕ್ತರ ಸಂಪರ್ಕ ಅಧಿಕಾರಿ ಶಂಕರ್ ಮತ್ತಿತರರು ಹಾಜರಿದ್ದರು.


Share this with Friends

Related Post