Mon. Jan 13th, 2025

ದೋಷಾರೋಪ ಪಟ್ಟಿಯಲ್ಲಿ ಭವಾನಿ ರೇವಣ್ಣ ಹೆಸರು ಸೇರ್ಪಡೆ

Share this with Friends

ಬೆಂಗಳೂರು,ಆ.1: ಕೆ.ಆರ್‌ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರೊಂದಿಗೆ ಪತ್ನಿ ಭವಾನಿ ರೇವಣ್ಣ ಅವರನ್ನೂ ಆರೋಪಿ ಎಂದು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.

ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಸೇರಿ 7 ಆರೋಪಿಗಳ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಎಸ್‌ಐಟಿ ದೋಷಾರೋಪ ಪಟ್ಟಿ ಸಲ್ಲಿಸಿದೆ,ಅಲ್ಲದೇ ಭವಾನಿ ರೇವಣ್ಣ ಅವರನ್ನ 8ನೇ ಆರೋಪಿಯಾಗಿ ಹೆಸರಿಸಲಾಗಿದೆ.

ರೇವಣ್ಣ ವಿರುದ್ಧ ಎಫ್‌ಐಆರ್‌ ರದ್ದು ಕೋರಿರುವ ಹಾಗೂ ರೇವಣ್ಣ ಜಾಮೀನು ರದ್ದಿಗೆ ಕೋರಿದ್ದ ಎರಡೂ ಅರ್ಜಿಗಳನ್ನು ಏಕಕಾಲಕಕ್ಕೆ ಹೈಕೋರ್ಟ್‌ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಎಸ್‌ಐಟಿ ಪರ ಪ್ರೊ.ರವಿ ವರ್ಮ ಕುಮಾರ್ ವಾದ ಮಂಡಿಸಿದರು, ಜಾಮೀನು ರದ್ದು ಕೋರಿರುವ ಸಂಬಂಧ ವಾದ-ಪ್ರತಿವಾದ ಮುಕ್ತಾಯಗೊಂಡಿದ್ದು, ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿ, ಎಫ್‌ಐಆರ್‌ ರದ್ದು ಕೋರಿರುವ ಅರ್ಜಿ ವಿಚಾರಣೆಯನ್ನು ಆಗಸ್ಟ್‌ 8ಕ್ಕೆ ಮುಂದೂಡಿದೆ.


Share this with Friends

Related Post