Mon. Dec 23rd, 2024

ಪ್ರತಿ ಉಪನ್ಯಾಸಕರಲ್ಲೂ ಕರ್ತವ್ಯದ ಬದ್ಧತೆ ಮುಖ್ಯ:ರವಿ

Share this with Friends

ಮೈಸೂರು,ಆಗಸ್ಟ್‌.1: ಉಪನ್ಯಾಸಕರಲ್ಲಿ ಕರ್ತವ್ಯದ ಬದ್ಧತೆ ಇರಬೇಕು ಎಂದು ಮಂಚೇಗೌಡನ ಕೊಪ್ಪಲು ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರವಿ ಮಂಚೇಗೌಡನ್ ಕೊಪ್ಪಲು
ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಮಂಚೇಗೌಡನ ಕೊಪ್ಪಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಲ್ಪನಾ ಅವರಿಗೆ ಬೀಳ್ಕೊಡುಗೆ
ಸಮಾರಂಭದಲ್ಲಿ ಅವರನ್ನು ಅಭಿನಂದಿಸಿ ಮಾತನಾಡಿದರು.

ಯಾವುದೇ ವೃತ್ತಿ ಆದರೂ ಬದ್ಧತೆ ಇರಬೇಕು ಕಲ್ಪನಾ ಉಪನ್ಯಾಸಕಿ ಬಹಳ ಪ್ರಾಮಾಣಿಕವಾಗಿ ಕಳೆದ ಆರು ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುವುದು ಅತ್ಯಂತ ಸ್ಮರಣೀಯ,
ವಿದ್ಯಾರ್ಥಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರು ಎಂದು ಹೇಳಿದರು.

ವಿದ್ಯಾರ್ಥಿಗಳ ಪ್ರೀತಿ ಸಮಾಜ ನೋಡುವಂತಹ ರೀತಿ ನೀತಿಗಳಿಂದಲೇ ನಾವು ಮಹಾತ್ಮರಾಗುತ್ತೇವೆ ಆದ್ದರಿಂದ ನಮ್ಮ ಮಂಚೇಗೌಡನ ಕೊಪ್ಪಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತುಂಬಾ ಅದೃಷ್ಟವಂತರು ಎಂದು ತಿಳಿಸಿದರು.

ಉಪನ್ಯಾಸಕಿ ಕಲ್ಪನಾ ಅವರು ದ್ವಿತೀಯ ಪಿಯುಸಿಯಲ್ಲಿ ಜೀವಶಾಸ್ತ್ರ ವಿಷಯದಲ್ಲಿ ಶೇಕಡ 95 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ 10,000 ‌ರೂ ಬಹುಮಾನಗಳನ್ನು ಕೊಟ್ಟ ಕ್ಷಣವನು ರವಿ ಅವರು ಸ್ಮರಿಸಿದರು.

ಅಧ್ಯಕ್ಷತೆಯನ್ನು ಪ್ರಾಂಶುಪಾಲ ಶಿವಮಲ್ಲು ವಹಿಸಿದ್ದರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಲ್ಪನಾ ಅವರಿಗೆ ಶುಭ ಕೋರಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು ‌


Share this with Friends

Related Post