Mon. Dec 23rd, 2024

ಷರತ್ತು ವಿಧಿಸಿ ಬಿಜೆಪಿ ಪಾದಯಾತ್ರೆಗೆ ಭಾಗಿಯಾಗಲು ಸಿದ್ದ ಎಂದ ಹೆಚ್‌ ಡಿ ಕೆ

Share this with Friends

ನವದೆಹಲಿ,ಆ.1: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಬೆಂಗಳೂರಿನಿಂದ ಮೈಸೂರಿಗೆ ನಡೆಸಲು ನಿರ್ಧರಿಸಿರುವ ಪಾದಯಾತ್ರೆಗೆ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಷರತ್ತು ಹಾಕಿ ಭಾಗಿಯಾಗಲು ನಿರ್ಧರಿಸಿದ್ದಾರೆ.

ಹಾಸನದ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ಕಿಡಿ ಕಾರಿದ್ದ ಹೆಚ್‌.ಡಿ ಕುಮಾರಸ್ವಾಮಿ ಪಾದಯಾತ್ರೆಗೆ ಜೆಡಿಎಸ್‌ ಬೆಂಬಲ ಇಲ್ಲ ಎಂದು ಬಹಿರಂಗವಾಗಿ ತಿಳಿಸಿದ್ದರು.

ಇದರಿಂದ ಬಿಜೆಪಿ ಜೆಡಿಎಸ್‌ ಮೈತ್ರಿಗೆ ಬಗ್ಗೆ ಪ್ರಶ್ನೆಗಳು ಏಳುತ್ತಿದ್ದಂತೆ ಬಿಜೆಪಿ ಹೈಕಮಾಂಡ್‌ ಚುರುಕಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ದೂರವಾಣಿ ಮೂಲಕ ಹೆಚ್‌.ಡಿ.ಕೆ ಜೊತೆ ಮಾತನಾಡಿ ಪಾದಯಾತ್ರೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ.

ಪ್ರೀತಂಗೌಡ ಪಾದಯಾತ್ರೆಗೆ ಬಾರದೇ ಇದ್ದರೆ ನಾನು ಭಾಗಿಯಾಗುತ್ತೇನೆ ಎಂದು ಕುಮಾರಸ್ವಾಮಿ ಷರತ್ತು ವಿಧಿಸಿದ್ದಾರೆ.


Share this with Friends

Related Post