Mon. Dec 23rd, 2024

ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಜಿ.ಸಿ ಪ್ರಕಾಶ್ ಗೆ ಬೀಳ್ಕೊಡುಗೆ

Share this with Friends

ಮೈಸೂರು,ಆಗಸ್ಟ್.2: ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಜಿ.ಸಿ ಪ್ರಕಾಶ್ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.

ಈ ಸಮಾರಂಭವು ಮೈಸೂರಿನ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ನಡೆಯಿತು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್ ಅವರ ನೇತೃತ್ವದಲ್ಲಿ ಡಾ. ಜಿ.ಸಿ ಪ್ರಕಾಶ್ ಅವರಿಗೆ ಅಭಿನಂದಿಸಿ ಆತ್ಮೀಯವಾಗಿ ಬೀಳ್ಕೊಡುಗೆ
ನೀಡಲಾಯಿತು.

ಈ ಸಂದರ್ಭದಲ್ಲಿ ನೂತನ ಪ್ರಾದೇಶಿಕ ಆಯುಕ್ತರಾದ ಡಿ. ಎಸ್ ರಮೇಶ್, ಡಾ. ಜಿ.ಸಿ ಪ್ರಕಾಶ್ ಅವರ ಧರ್ಮಪತ್ನಿ ಡಾ. ಪ್ರೊ. ಅನುರಾಧ ಪಟೇಲ್ ಆರ್, ಗೋವಿಂದೇಗೌಡ,ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಶಿವಲಿಂಗಯ್ಯ, ಜಗದೀಶ್, ಮಹದೇವ್, ಸುರೇಶ್, ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post