Mon. Dec 23rd, 2024

ಹುಲಿ ದಾಳಿಗೆ ಮೇಕೆ ಬಲಿ:ಗಣಿಶೆಡ್ ಗ್ರಾಮಸ್ಥರಲ್ಲಿ ಆತಂಕ

Share this with Friends

ಮೈಸೂರು,ಆ.2: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೋಕಿನ ಗಣಿಶೆಡ್ ಗ್ರಾಮದಲ್ಲಿ ಹುಲಿ ದಾಳಿಗೆ ಮೇಕೆ ಬಲಿಯಾಗಿ ಹಸು ಗಾಯಗೊಂಡಿದ್ದು ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಗ್ರಾಮದ ಹೊರವಲಯದಲ್ಲಿ ಅಡ್ಡಾಡಿದ ಹುಲಿಯ ಚಲನವಲನ ಕಾರು ಪ್ರಯಾಣಿಕರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಮೇಕೆ‌ಯನ್ನು ಬಲಿ ಪಡೆದಿರುವ ಹುಲಿ‌ ಹಸುವನ್ನು ಗಾಯಗೊಳಿಸಿರುವುದರಿಂದ ಜಮೀನಿನ ಕಡೆ ಹೋಗಲೂ ಗ್ರಾಮಸ್ಥರು ಅಂಜುತ್ತಿದ್ದಾರೆ.

ಬೇಗನೆ ಹುಲಿ ಸೆರೆ ಹಿಡಿಯಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಕಾರ್ಯಾಚರಣೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಎಚ್.ಡಿ.ಕೋಟೆ ಮತ್ತು ಮೇಟಿಕುಪ್ಪೆ ಅರಣ್ಯ ಇಲಾಖೆ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆಂದು ಗ್ರಾಮಸ್ಥರು ತೀವ್ರ‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Share this with Friends

Related Post