Mon. Dec 23rd, 2024

ಶ್ರೀ ಪಾರ್ವತಿ ದೇವಿಗೆ ಅರಿಶಿಣದ ಅಲಂಕಾರ

Share this with Friends

ಮೈಸೂರು, ಆ.2: ಮೈಸೂರಿನ ಅಗ್ರಹಾರ ಕೆ ಆರ್ ಪೊಲೀಸ್ ಠಾಣೆ ಪಕ್ಕದಲ್ಲಿರುವ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ಪಾರ್ವತಿ ದೇವಿಗೆ ವಿಶಿಷ್ಟ ಅಲಂಕಾರ ಮಾಡಲಾಗಿತ್ತು.

ಇಂದು ಕೊನೆಯ ಆಷಾಢ‌ ಶುಕ್ರವಾರ. ಹಾಗಾಗಿ ಶ್ರೀ ಪಾರ್ವತಿ ದೇವಿಗೆ ಅರಿಶಿಣದ ಅಲಂಕಾರ ಮಾಡಲಾಗಿತ್ತು.

ದೇವಿಗೆ ಅರಿಶಿನದಿಂದಲೇ ಶೃಂಗಾರ ಮಾಡಿ ರೇಷ್ಮೆ ಸೀರೆ ಉಡಿಸಿ ಸೇವಂತಿಗೆ ಮಲ್ಲಿಗೆ ಸೇರಿದಂತೆ ಇತರೆ ಹೂಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿದ್ದು ನೋಡಲು ಎರಡು ಕಣ್ಣುಗಳು ಸಾಲದಂತಿತ್ತು.

ದೇವಾಲಯದ ಮುಖ್ಯ ‌ಶಿವಾರ್ಚಕರಾದ ಎಸ್ ಯೋಗಾನಂದ ಅವರ ನೇತೃತ್ವದಲ್ಲಿ ದೇವಿಗೆ ಅಭಿಷೇಕ ವಿಶೇಷ ಅಲಂಕಾರ ಮತ್ತು ಪೂಜೆಗಳನ್ನು ನೆರವೇರಿಸಿ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.


Share this with Friends

Related Post