Mon. Dec 23rd, 2024

ಪೆಟ್ಟಿಗೆ ಅಂಗಡಿಯಲ್ಲಿ ಮಕ್ಕಳಿಗೆ ಚಾಕೊಲೇಟ್​ ಖರೀದಿಸಿದ ಯಶ್​ ಫೋಟೋ ವೈರಲ್​

Rocking Star Yash
Share this with Friends

ರಾಕಿಂಗ್ ಸ್ಟಾರ್ ನಟ ಯಶ್ ಪೆಟ್ಟಿಗೆ ಅಂಗಡಿಯಲ್ಲಿ ಮಕ್ಕಳಿಗಾಗಿ ಚಾಕೊಲೇಟ್ ಖರೀದಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಯಶ್​ ಇಂದಿಗೂ ಕೂಡ ಸರಳತೆಯನ್ನು ಮರೆತಿಲ್ಲ. ಅಪ್ಪಟ ಫ್ಯಾಮಿಲಿ ಮ್ಯಾನ್​ ಆಗಿ ಅವರು ಜೀವನ ಸಾಗಿಸುತ್ತಿದ್ದಾರೆ.

ಕುಟುಂಬದ ಜೊತೆ ತೆರಳಿದ್ದಾಗ ಮಗಳಿಗೆ ಚಾಕೊಲೇಟ್​ ಕೊಡಿಸುವ ಸಲುವಾಗಿ ಯಶ್​ ಅವರು ಪೆಟ್ಟಿಗೆ ಅಂಗಡಿಗೆ ಭೇಟಿ ನೀಡಿದ್ದಾರೆ. ಮಗಳು ಕೇಳಿದ ಚಾಕೊಲೇಟ್​ ಕೊಡಿಸಿದ್ದಾರೆ. ಅವರ ಇಡೀ ಕುಟುಂಬವೇ ಸಿಂಪಲ್​. ಪೆಟ್ಟಿಗೆ ಅಂಗಡಿಗೆ ಯಶ್​ ತೆರಳಿದ್ದಾಗ ಅವರ ಜೊತೆ ರಾಧಿಕಾ ಪಂಡಿತ್​ ಕೂಡ ಇದ್ದರು. ಸಿಂಪಲ್​ ಮಹಿಳೆಯ ರೀತಿ ಅವರು ಅಲ್ಲಿ ಕುಳಿತಿರುವ ಫೋಟೋ ವೈರಲ್​ ಆಗಿದೆ.

ತುಂಬ ಕಷ್ಟದಿಂದ ಬೆಳೆದುಬಂದ ನಟ ಯಶ್​ ಅವರಿಗೆ ಇಂದು ಬಹುಭಾಷೆಯಲ್ಲಿ ಬೇಡಿಕೆ ಇದೆ. ಹಾಗಂತ ಅವರಲ್ಲಿನ ಸರಳತೆ ಕಾಣೆಯಾಗಿಲ್ಲ. ಕಷ್ಟ ಮತ್ತು ಬಡತನವನ್ನು ಕಂಡು ಬಂದಿರುವ ಅವರಿಗೆ ಎಲ್ಲ ಅನುಭವ ಇದೆ. ಮಗಳಿಗಾಗಿ ಸಾಮಾನ್ಯರಂತೆ ಪುಟ್ಟ ಅಂಗಡಿಗೆ ಬಂದ ಯಶ್​ ಅವರ ಫೋಟೋ ನೋಡಿ ಫ್ಯಾನ್ಸ್​ ಮೆಚ್ಚುಗೆ ಸೂಚಿಸಿದ್ದಾರೆ.

ಆಸ್ತಮಾಗೆ ಆಯುರ್ವೇದ ಚಿಕಿತ್ಸೆ ಹೇಗೆ..?


Share this with Friends

Related Post