Sat. Apr 19th, 2025

ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳು ಸಾವು

Share this with Friends

ಭೂಪಾಲ್,ಆ.4: ಭಾರಿ ಮಳೆಗೆ ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳು ಮೃತಪಟ್ಟಿರುವ‌ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದ್ದು ಇದು ನ್ಯಾಯವೇ ಶಿವಾ ಎಂದು ಜನ ಕೇಳುತ್ತಿದ್ದಾರೆ.

ದೇವಸ್ಥಾನದ ಪಕ್ಕದಲ್ಲಿದ್ದ ಶೆಡ್ ನಲ್ಲಿ ಮಕ್ಕಳು ಶಿವಲಿಂಗ ನಿರ್ಮಾಣ ಮಾಡುತ್ತಿದ್ದರು,ಮಳೆಗೆ ಶಿಥಲಗೊಂಡಿದ್ದ ದೇವಾಲಯದ ಗೋಡೆ ಏಕಾಏಕಿ ಕುಸಿದುಬಿದ್ದಿದೆ.ದೇವ ನಿನ್ನ ಮೂರ್ತಿ ನಿರ್ಮಾಣ ಮಾಡುತ್ತಿದ್ದಾಗ‌‌ ನೀನು ಈ ಘೋರ ದುರಂತ ತಂದೆಯಾ ಎಂದು ‌ಮಕ್ಕಳ ಪೋಷಕರು ದುಃಖಿಸುತ್ತಿದ್ದಾರೆ.

ಮೃತ ಮಕ್ಕಳು 10 ರಿಂದ 14 ವರ್ಷದೊಳಗಿನವರಾಗಿದ್ದು ಘಟನೆಯಲ್ಲಿ ಇನ್ನೂ ಹಲವಾರು ಮಂದಿ ಗಾಯಗೊಂಡಿದ್ದಾರೆ.ಅವರುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇವಸ್ಥಾನದಲ್ಲಿ ನಡೆಯಲಿರುವ ಭಗವತ್ ಕಥಾ ಕಾರ್ಯಕ್ರಮಕ್ಕಾಗಿ ಮಕ್ಕಳು ಶಿವಲಿಂಗ ಮಾಡುತ್ತಿದ್ದರು.ಸ್ಥಳಕ್ಕೆ ಸ್ಥಳೀಯ ಪೋಲೀಸರು,ರಕ್ಷಣಾ ಪಡೆ ಧಾವಿಸಿ ಮಣಿನಡಿ ಸಿಲುಕಿದವರನ್ನು ಹೊರತೆಗೆಯಲು ಶ್ರಮಿಸಿದರು.


Share this with Friends

Related Post