Mon. Dec 23rd, 2024

ಮೈಸೂರಿನಲ್ಲಿ ಮಾ. 6ರಿಂದ ಬಹುರೂಪಿ ನಾಟಕೋತ್ಸವ

Share this with Friends

ಮೈಸೂರು,ಫೆ.17: ಮೈಸೂರಿನಲ್ಲಿ ಮಾರ್ಚ್ 6 ರಿಂದ 11 ರ ತನಕ ಬಹುರೂಪಿ ನಾಟಕೋತ್ಸವ‌ ಹಮ್ಮಿಕೊಳ್ಳಲಾಗಿದೆ ಎಂದು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಸಂಚಾಲಕ ಉಮೇಶ್ ತಿಳಿಸಿದರು.

ಬಹುರೂಪಿ ನಾಟಕೋತ್ಸವದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಇವ ನಮ್ಮವ ಇವ ನಮ್ಮವ ಎಂಬ ಆಶಯದೊಂದಿಗೆ ಈ ಭಾರಿ ಬಹುರೂಪಿ ನಾಟಕೋತ್ಸವ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಕನ್ನಡ ಮತ್ತು ವಿವಿಧ ಭಾಷೆ ಸೇರಿದಂತೆ ಒಟ್ಟು 17ನಾಟಕಗಳು ರಂಗಾಯಣದಲ್ಲಿ ಪ್ರದರ್ಶನಗೊಳ್ಳಲಿವೆ.

ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಮಾರ್ಚ್ 7ರಂದು ಬಹುರೂಪಿ ನಾಟಕೋತ್ಸವ ಉದ್ಘಾಟನೆ ಮಾಡಲಿದ್ದಾರೆ.

ನಾಟಕೋತ್ಸವದಲ್ಲಿ ಚಿತ್ರ ಪ್ರದರ್ಶನ, ವಚನ ಸಾಹಿತ್ಯದ ಸಮಕಾಲೀನ ಗೋಷ್ಠಿಗಳು ನಡೆಯಲಿವೆ ಎಂದು ಉಮೇಶ್ ತಿಳಿಸಿದರು.


Share this with Friends

Related Post