Wed. Dec 25th, 2024

ಕಾಯಕ ಮಾಡಿದರೆ ಬಡತನ ನಿರ್ಮೂಲನೆ ಸಾಧ್ಯ:ದೇವನೂರು ಪ್ರಶಾಂತ್

Share this with Friends

ಮೈಸೂರು,ಆ.7: ಮೈಸೂರು ತಾಲೂಕಿನ ಶೆಟ್ಟನಾಯಕನಹಳ್ಳಿಯ ಪಟ್ಟದ ಮಠದಲ್ಲಿ ಬಸವ ಭಾರತ ಪ್ರತಿಷ್ಠಾನದ ವತಿಯಿಂದ ಬಸವಣ್ಣ ಸ್ವಾಮೀಜಿ ನೇತೃತ್ವದಲ್ಲಿ ಇಷ್ಟಲಿಂಗ ಧಾರಣೆ ನೆರವೇರಿಸಲಾಯಿತು.

ನರಸಿಂಹರಾಜಪುರ ಬಸವ ಕೇಂದ್ರದ ಬಸವಯೋಗಿಪ್ರಭುಗಳು ಇಷ್ಟಲಿಂಗ ಧಾರಣೆ ನೆರವೇರಿಸಿ ಶಿವಯೋಗ ವನ್ನು ನಡೆಸಿಕೊಟ್ಟರು.

ಈ ವೇಳೆ ಪ್ರವಚನ ನೀಡಿದ ದೇವನೂರು ಪ್ರಶಾಂತ್ ಅವರು,ಪ್ರತಿಯೊಬ್ಬರೂ ಕಾಯಕ ಮಾಡಿದರೆ ಬಡತನ ನಿರ್ಮೂಲನೆಯಾಗುತ್ತದೆ ಎಂದು ಹೇಳಿದರು.

ಸತ್ಯ ಶುದ್ಧ ಕಾಯಕ ಮಾಡಬೇಕು,ದಾಸೋಹ ಮಾಡಬೇಕು, ಮೈಸೂರಿನ ರಾಜ ಮಮ್ಮುಡಿ ಕ್ರಷ್ಣರಾಜ ಒಡೆಯರ್ ಗೂ ದೇವನೂರು ಗುರುಮಲ್ಲೇಶ್ವರರು ಸತ್ಯ ಶುದ್ಧ ಕಾಯಕ ಕಲಿಸಿದ್ದರು ಎಂದು ಸ್ಮರಿಸಿದರು.

ನಂದರಾಜ , ಶಿವರುದ್ರಪ್ಪ. ಸಿ, ಲಿಂಗ ರಾಜಪ್ಪ ಮಹಾದೇವ ಸ್ವಾಮಿ, ಶೆಟ್ಟನಾಯಕನಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.


Share this with Friends

Related Post