Sat. Apr 19th, 2025

ನಾಳೆ ಕಾಂಗ್ರೆಸ್ ಜನಾಂದೋಲನ ಸಮಾವೇಶ:ಮೈಸೂರಿಗೆ ಬಂದ ಸಿಎಂ

Share this with Friends

ಮೈಸೂರು,ಆ.8: ಆ.9ರಂದು ನಡೆಯಲಿರುವ ಜನಾಂದೋಲನ ಸಮಾವೇಶದ ಸಿದ್ಧತೆಯನ್ನು ಸಚಿವ ಮಹದೇವಪ್ಪ ಹಾಗೂ ಜಿಲ್ಲಾ ಕಾಂಗ್ರೆಸ್ ನೋಡಿಕೊಳ್ಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಜನಾಂದೋಲನ ಸಮಾವೇಶದ ಹಿನ್ನೆಲೆಯಲ್ಲಿ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಎಂ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ನಾಳಿನ ಸಿದ್ದತೆ ಬಗ್ಗೆ ಜಿಲ್ಲಾ ಕಾಂಗ್ರೆಸ್ ಮಾಹಿತಿ ಕೊಡುತ್ತದೆ ನಮ್ಮ ಸಚಿವರು,ಶಾಸಕರು,ಎಲ್ಲಾ ಮುಖಂಡು ಪಾಲ್ಗೊಳ್ಳಲಿದ್ದಾರೆ
ಎಂದು ಹೇಳಿದರು.

ಮುಖ್ಯ ಮಂತ್ರಿಗಳ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಮತ್ತೊಂದು ದೂರು ದಾಖಲಾಗಿದಿಯಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ,ಇಂತಹ ಸುಳ್ಳು ದೂರುಗಳನ್ನು ಎದುರಿಸುವ ಶಕ್ತಿ ನನಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ನನ್ನ ಮೇಲಿರುವ ಆರೋಪಗಳು ಸೇರಿದಂತೆ ಎಲ್ಲದಕ್ಕೂ ನಾಳೆ ಉತ್ತರ ಕೊಡುತ್ತೇನೆ ಎಂದು ಸಿಎಂ ಹೇಳಿದರು.

ಸಿದ್ದರಾಮಯ್ಯ ಅವರೊಂದಿಗೆ ಸಚಿವ ಜಮೀರ್ ಅಹಮದ್ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಜರಿದ್ದರು.


Share this with Friends

Related Post